ನವದೆಹಲಿ : ಜನಪ್ರಿಯ ಮೃದುಪಾನೀಯ 'ನಿಂಬೂಜ್' ಮೇಲಿನ ಅಬಕಾರಿ ಸುಂಕದ ಪ್ರಮಾಣವನ್ನು ನಿಖರವಾಗಿ ನಿಗದಿಗೊಳಿಸಲು ಅದು ಲಿಂಬು ಪಾನೀಯವೇ ಅಥವಾ ಹಣ್ಣಿನ ತಿರುಳು ಅಥವಾ ರಸವನ್ನು ಒಳಗೊಂಡಿರುವ ಪಾನೀಯವೇ ಎನ್ನುವುದನ್ನು ನಿರ್ಧರಿಸಲು ಸರ್ವೋಚ್ಚ ನ್ಯಾಯಾಲಯವು ಒಪ್ಪಿಕೊಂಡಿದೆ.
ನವದೆಹಲಿ : ಜನಪ್ರಿಯ ಮೃದುಪಾನೀಯ 'ನಿಂಬೂಜ್' ಮೇಲಿನ ಅಬಕಾರಿ ಸುಂಕದ ಪ್ರಮಾಣವನ್ನು ನಿಖರವಾಗಿ ನಿಗದಿಗೊಳಿಸಲು ಅದು ಲಿಂಬು ಪಾನೀಯವೇ ಅಥವಾ ಹಣ್ಣಿನ ತಿರುಳು ಅಥವಾ ರಸವನ್ನು ಒಳಗೊಂಡಿರುವ ಪಾನೀಯವೇ ಎನ್ನುವುದನ್ನು ನಿರ್ಧರಿಸಲು ಸರ್ವೋಚ್ಚ ನ್ಯಾಯಾಲಯವು ಒಪ್ಪಿಕೊಂಡಿದೆ.
ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಬಿ.ವಿ.ನಾಗರತ್ನ ಅವರ ಪೀಠವು ಅರ್ಜಿಯ ವಿಚಾರಣೆಯನ್ನು ನಡೆಸಲಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಇತ್ತೀಚಿನ ವಿಚಾರಣೆ ಸಂದರ್ಭದಲ್ಲಿ ಪ್ರಕಟಿಸಿದೆ. 2015 ಮಾರ್ಚ್ ನಿಂದಲೂ ಈ ಪ್ರಕರಣವು ನಡೆಯುತ್ತಿದ್ದು, ಸರ್ವೋಚ್ಚ ನ್ಯಾಯಾಲಯದ ನಿರ್ಧಾರವನ್ನು ಆಧರಿಸಿ ನಿಂಬೂಜ್‌ನ ವರ್ಗೀಕರಣವು ಬದಲಾಗಲಿದೆ.
ಅರ್ಜಿದಾರ ಕಂಪನಿ ಆರಾಧನಾ ಫುಡ್ಸ್ ನಿಂಬೂಜ್ ನ ವರ್ಗೀಕರಣವನ್ನು ಈಗಿನ ಹಣ್ಣಿನ ತಿರುಳು ಅಥವಾ ರಸ ಆಧಾರಿತ ಪಾನೀಯದಿಂದ ಲಿಂಬು ಪಾನೀಯ ಎಂದು ಬದಲಿಸುವಂತೆ ಕೋರಿದೆ. ಸರ್ವೋಚ್ಚ ನ್ಯಾಯಾಲಯವು ಎಪ್ರಿಲ್‌ನಲ್ಲಿ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.
ಪ್ರಸ್ತುತ ವರ್ಗೀಕರಣವು ಕಸ್ಟಮ್ಸ್, ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ಅಲಹಾಬಾದ್ ಪೀಠದ ಕಳೆದ ವರ್ಷದ ನವಂಬರ್‌ನ ನಿರ್ಧಾರವನ್ನು ಆಧರಿಸಿದೆ. ನ್ಯಾಯಮೂರ್ತಿಗಳಾದ ದಿಲೀಪ್ ಗುಪ್ತಾ ಮತ್ತು ಪಿ.ವೆಂಕಟ ಸುಬ್ಬಾರಾವ್ ಅವರ ಪೀಠವು ನಿಂಬೂಜ್ ಹಣ್ಣಿನ ರಸ ಆಧಾರಿತ ಪಾನೀಯವೆಂದು ವರ್ಗೀಕರಿಸಿರುವುದರಿಂದ ಅದು ಕೇಂದ್ರೀಯ ಅಬಕಾರಿ ಸುಂಕ ಕಾಯ್ದೆಯ ಐಟಂ 2202 90 20ರಡಿ ಸೇರಿಸಲ್ಪಟ್ಟಿದೆ.
ಆದೇಶವನ್ನು ರದ್ದುಗೊಳಿಸುವಂತೆ ಅರ್ಜಿಯಲ್ಲಿ ಕೋರಿರುವ ಆರಾಧನಾ ಫುಡ್ಸ್, ನಿಂಬೂಜನ್ನು ಕೇಂದ್ರೀಯ ಅಬಕಾರಿ ಕಾಯ್ದೆಯ ಮೊದಲ ಅನುಸೂಚಿಯ ಸಿಇಟಿಎಚ್ 2022 10 20ರಡಿ ವರ್ಗೀಕರಿಸಬೇಕು ಎಂದು ವಾದಿಸಿದೆ.
ಪೆಪ್ಸಿಕೋ 2013ರಲ್ಲಿ ನಿಂಬೂಜ್ ಅನ್ನು ಬಿಡುಗಡೆಗೊಳಿಸಿತ್ತು ಮತ್ತು ಅದು ನೈಜ ಲಿಂಬು ರಸವಾಗಿದೆ, ಸೋಡಾ ಪಾನೀಯವಲ್ಲ ಎಂದು ಬಣ್ಣಿಸಲಾಗಿತ್ತು. ಇದು ನಿಂಬೂಜ್ ಅನ್ನು ಲಿಂಬು ಪಾನೀಯ ಅಥವಾ ಹಣ್ಣಿನ ರಸ/ತಿರುಳು ಆಧಾರಿತ ರಸವೆಂದು ಪರಿಗಣಿಸಬೇಕೇ ಎಂಬ ಚರ್ಚೆಗೆ ಕಾರಣವಾಗಿತ್ತು.