ಕುಂಬಳೆ: ಜಗತ್ತಿನಲ್ಲಿ ಇಸ್ಲಾಂ ಧರ್ಮವನ್ನು ವಿರೂಪಗೊಳಿಸುವ ಪ್ರಯತ್ನಗಳು ಅಧಿಕವಾತ್ತಿವೆ, ಆದರೆ ಎಲ್ಲವನ್ನು ಪ್ರತಿರೋಧಿಸಲು ಇಸ್ಲಾಮಿಕ್ ಆಶಯಗಳಿಗೆ ಎಲ್ಲಾ ಕಾಲದಲ್ಲೂ ಸಾಧ್ಯವಾಗಿದೆ ಎಂದು ಸುಪ್ರಸಿದ್ಧ ಭಾಷಣಗಾರ ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ ಹೇಳಿದರು.
ಮುಹಿಮತ್ ನಲ್ಲಿ ನಡೆದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ರವರ 16 ನೇ ಉರೂಸ್ ಮುಬಾರಕ್ ಪ್ರಯುಕ್ತ ನಡೆದ ಮತಪ್ರಭಾಷಣ ವೇದಿಕೆಯಲ್ಲಿ ಅವರು ಮಾತನಾಡಿದರು.
ಒಂದು ವಿಭಾಗವು ಇಸ್ಲಾಮಿನ ಹೆಸರಿನಲ್ಲಿ ತಪ್ಪು ಧಾರಣೆಗಳನ್ನು ಪ್ರಚಾರ ಪಡಿಸುತ್ತಿದೆ. ಇದಕ್ಕೆ ಬೇಕಾಗಿ ಅರಬಿ ಭಾಷೆಯನ್ನು ಕೂಡ ಕೆಲವರು ದುರುಪಯೋಗ ಪಡಿಸುತ್ತಿದ್ದಾರೆ. ಹಿಜಾಬ್ ವಿಷಯದಂತಹ ವಿವಾದಗಳು ಅನಗತ್ಯವಾಗಿದೆ. ಇಸ್ಲಾಮಿನ ಸೌಂದರ್ಯವನ್ನು ಕಲಿಯಲು ಮತ್ತು ತಿಳಿಯಲು ಮುಂದಾದರೆ ಎಲ್ಲಾ ವಿವಾದಗಳು ಕೊನೆಗೊಳ್ಳುತ್ತದೆ. ಮಹಿಳೆಯರಿಗೆ ಅತ್ಯಧಿಕ ಸುರಕ್ಷತೆ ನೀಡಿದ ಧರ್ಮವಾಗಿದೆ ಇಸ್ಲಾಮ್. ಧರ್ಮವನ್ನು ತಪ್ಪಾಗಿ ಚಿತ್ರೀಕರಿಸುವ ಸನ್ನಿವೇಶಗಳನ್ನು ಎಲ್ಲರೂ ಜಾಗ್ರತೆ ವಹಿಸಬೇಕು ಎಂದು ಅವರು ಹೇಳಿದರು.
ಸಯ್ಯಿದ್ ಅಹ್ಮದ್ ಕಬೀರ್ ಜಮಲುಲ್ಲೈಲಿ ಪ್ರಾರ್ಥನೆ ನಡೆಸಿದರು. ಸಿ.ಎನ್ ಅಬ್ದುಲ್ ಖಾದರ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಮುಸ್ತಫ ಸಖಾಫಿ ಪಟ್ಟಾಂಬಿ ಸ್ವಾಗತಿಸಿದರು.