ಬದಿಯಡ್ಕ: ಅನುವಾದ ಅನುಭವ ಮತ್ತು ಕತೆ-ಕರ್ತೃ ಸಂವಾದ ಎಂಬ ಕಾರ್ಯಕ್ರಮ ಇಂದು ಬದಿಯಡ್ಕದ ಸೀತಾರಾಮ್ ಬಿಲ್ಡಿಂಗ್ ಶಾಸ್ತ್ರೀಸ್ ಕಂಪೌಂಡ್ ನಲ್ಲಿ ಅಪರಾಹ್ನ 2.30ರಿಂದ ಆಯೋಜಿಸಲಾಗಿದೆ.
ಶಂಕರ್ ಕುಂಜತ್ತೂರು ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಶಶಿ ಭಾಟಿಯಾ ಅವರ ಆನೆಬಾಗಿಲು ಕಥಾ ಸಂಕಲನದ ಅನುವಾದಕ ರಾಜನ್ ಮುನಿಯೂರು ಅವರು ಅನುವಾದ ಅನುಭವ ಬಿಚ್ಚಿಡುವರು. ಸರ್ವಮಂಗಳಾ ನಾಯ್ಕಾಪು, ದಿವ್ಯಗಂಗಾ ಮುಳ್ಳೇರಿಯ ಸಂವಾದದಲ್ಲಿ ಭಾಗವಹಿಸುವರು. ಪುರುಷೋತ್ತಮ ಭಟ್, ಮೀನಾಕ್ಷಿ ಬೊಡ್ಡೋಡಿ ಮೇಘಶ್ರೀ ಪುತ್ತಿಗೆ ಕಥೆಗಾರರಾಗಿ ಭಾಗವಹಿಸುವರು. ಡಾ.ಶ್ರೀನಿಧಿ ಸರಳಾಯ ಬದಿಯಡ್ಕ, ಸುಂದರ ಬಾರಡ್ಕ ಮೊದಲಾದವರು ನೇತೃತ್ವ ನೀಡುವರು. ಕಾರ್ಯಕ್ರಮದ ಭಾಗವಾಗಿ ಭಾವಗೀತೆಗಳ ಗಾಯನ ನಡೆಯಲಿದೆ.