ಬದಿಯಡ್ಕ: ಕೇರಳ ಸ್ಟೇಟ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ವತಿಯಿಂದ ವಾಸಯೋಗ್ಯವಾದ ಮನೆಯಿಲ್ಲದ ಮಕ್ಕಳಿಗೆ ಮನೆ ನಿರ್ಮಿಸಿಕೊಡುವ ಯೋಜನೆಯಾಗಿದೆ ಸ್ನೇಹ ಭವನ. ಈ ಯೋಜನೆಯ ಅಂಗವಾಗಿ ಕುಂಬಳೆ ಸ್ಥಳೀಯ ಸಂಸ್ಥೆಯ ವತಿಯಿಂದ ನಿರ್ಮಿಸಿಕೊಡುವ ಸ್ನೇಹ ಭವನಕ್ಕೆ ಪೆರಡಾಲ ಸೇವಾ ಸಹಕಾರಿ ಬ್ಯಾಂಕಿನ ವತಿಯಿಂದ 10 ಸಾವಿರ ರೂಪಾಯಿ ದೇಣಿಗೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಜಯದೇವ ಖಂಡಿಗೆ ಇವರು ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಸ್ಕೌಟ್ ಮತ್ತು ಗೈಡ್ ಅಧ್ಯಾಪಕರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಕಾರ್ಯದರ್ಶಿ ಅಜಿತ, ಸಹ ಕಾರ್ಯದರ್ಶಿ ವಿಷ್ಣು ಶರ್ಮ, ಸ್ಕೌಟ್ ಅಧ್ಯಾಪಕರಾದ ಶಿವರಂಜನ್ ಪಿ ಆರ್, ಅವಿನಾಶ ಕಾರಂತ ಎಮ್, ಗೈಡ್ ಅಧ್ಯಾಪಿಕೆಯರಾದ ವಾಣಿ ಪಿ ಎಸ್, ಅನ್ನಪೂರ್ಣ ಎಸ್ ಉಪಸ್ಥಿತರಿದ್ದರು.