HEALTH TIPS

ಉಕ್ರೇನ್ ಕದನ ನಿಲುಗಡೆಗೆ ವಿಶ್ವಸಂಸ್ಥೆ ನೇರ ಸಂಧಾನ: ಭಾರತ, ಚೀನಾ ಮತ್ತು ಫ್ರಾನ್ಸ್ ಜೊತೆ ಚರ್ಚೆ

           ಜಿನೇವಾ: ರಷ್ಯಾ- ಉಕ್ರೇನ್ ಮಧ್ಯೆ ನೇರವಾಗಿ ಸಂಧಾನ ನಡೆಸುವಂತೆ ಕೋರಿ ವಿಶ್ವಸಂಸ್ಥೆ ಭಾರತ, ಚೀನಾ ಮತ್ತು ಫ್ರಾನ್ಸ್ ದೇಶಗಳೊಂದಿಗೆ ಚರ್ಚೆ ನಡೆಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ, ತಾನು ಉಕ್ರೇನ್ ಮತ್ತು ರಷ್ಯಾ ಎರಡೂ ದೇಶಗಳ ಜೊತೆ ಸಂಪರ್ಕದಲ್ಲಿ ಇರುವುದಾಗಿ ತಿಳಿಸಿದೆ. 

              ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧ ಈ ಕೂಡಲೆ ನಿಲ್ಲಬೇಕು. ಕದನವಿರಾಮ ಏರ್ಪಡಬೇಕು ಎಂದು ಭಾರತದ ಪ್ರಧಾನಿ ಮೋದಿ ಈ ಹಿಂದೆ ಹಲವು ಬಾರಿ ಹೇಳಿದುದನ್ನು ವಿಶ್ವಸಂಸ್ಥೆಯ ಭಾರತದ ಪ್ರತಿನಿಧಿ ತಿಳಿಸಿದ್ದಾರೆ. 

            ವಿಶ್ವಸಂಸ್ಥೆಯಲ್ಲಿ ಭಾರತ ಪ್ರತಿನಿಧಿ ರವೀಂದ್ರ ಅವರು ಉಕ್ರೇನಿನಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ಸ್ಥಳಾಂತರಿಸಲು ನಡೆಸಿದ ಆಪರೇಷನ್ ಗಂಗಾ ಕುರಿತು ಮಾಹಿತಿ ಹಂಚಿಕೊಂಡರು.

              ಇದುವರೆಗೂ ಒಟ್ಟು 22,500 ಭಾರತೀಯರನ್ನು ಉಕ್ರೇನಿನಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಈ ಕಾರ್ಯಾಚರಣೆಗೆ ನೆರವು ನೀಡಿದ ದೇಶಗಳಿಗೆ ರವೀಂದ್ರ ಧನ್ಯವಾದ ಅರ್ಪಿಸಿದರು. 

            ಇದೇ ವೇಳೆ ರಷ್ಯಾ ಉಕ್ರೇನ್ ಯುದ್ಧದಿಂದ ಬಡ ದೇಶಗಳು ಆಹಾರ ಸಮಸ್ಯೆಯನ್ನು ಎದುರಿಸುತ್ತಿರುವುದಾಗಿ ವಿಶ್ವಸಂಸ್ಥೆ ಮುಖ್ಯಸ್ಥ ಗುಟೆರಸ್ ಆತಂಕ ವ್ಯಕ್ತಪಡಿಸಿದ್ದಾರೆ. ಬಡದೇಶಗಳು ಮುಖ್ಯವಾಗಿ ಗೋದಿಗಾಗಿ ರಷ್ಯಾ- ಉಕ್ರೇನನ್ನು ಅವಲಂಬಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries