ತ್ರಿಶೂರ್: ರಸ್ತೆಗಳಲ್ಲಿ ಕಂಡುಬಂದ 'ಎಲ್' ಚಿಹ್ನೆಯನ್ನು ಕಂಡು ಸ್ಥಳೀಯರು ಭಯಭೀತರಾದ ಘಟನೆ ನಡೆದಿದೆ. ತ್ರಿಶೂರ್ ನಗರದ ವಿವಿಧ ರಸ್ತೆಗಳಲ್ಲಿ ಎಲ್ ಚಿಹ್ನೆ ಕಂಡುಬಂದಿದ್ದು ಆಶ್ಚರ್ಯದೊಂದಿಗೆ ಜನರು ಭಯಭೀತರಾಗಿರುವರು. ಕೊನೆಗೆ ಪೋಲೀಸರು ಸಮಜಾಯಿಷಿ ನೀಡಿದಾಗ ಸ್ಥಳೀಯರು ನಿರಾಳರಾದರು.
ಇದು ಕೆ-ರೈಲ್ ಭೂಸ್ವಾಧೀನದ ಭಾಗವಾಗಿದ್ದು, ಅನಪೇಕ್ಷಿತ ಸಮಯದಲ್ಲಿ ಕಳ್ಳರು ಅಥವಾ ಸಮಾಜ ವಿರೋಧಿಗಳಿಂದ ಮಾಡಲ್ಪಟ್ಟಿದೆ ಎಂದು ಸ್ಥಳೀಯರು ಆತಂಕಕ್ಕೆ ಕಾರಣವಾಯಿತು. ಏಕೆಂದರೆ ಎಲ್ ಚಿಹ್ನೆಗಳನ್ನು ರಾತ್ರಿವೇಳೆ ರಚಿಸಲಾಗಿತ್ತು. ಇದು ಹೇಗೆ ಉಂಟಾಯಿತು ಮತ್ತು ಯಾರು ಮಾಡಿದ್ದಾರೆ ಎಂದು ತಿಳಿಯಲು ಸ್ಥಳೀಯರು ಅಂತಿಮವಾಗಿ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿದರು. ಗೊತ್ತಿಲ್ಲ ಎಂದು ತಿಳಿಸಿದಾಗ ಸ್ಥಳೀಯರ ಗಾಬರಿ ಹೆಚ್ಚಾಯಿತು. ಈ ವೇಳೆ ಭಯಪಡುವ ಅಗತ್ಯವಿಲ್ಲ ಎಂಬ ಮಾಹಿತಿ ಪೋಲೀಸರು ನೀಡಿದರು.
ಡ್ರೋನ್ ಸಮೀಕ್ಷೆಯ ಭಾಗವಾಗಿ ಈ ಚಿಹ್ನೆಯನ್ನು ದಾಖಲಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಕ್ಯಾಮೆರಾದಲ್ಲಿ ಡ್ರೋನ್ ಗೆ ಕಾಣಿಸಲು ಗುರುತು ಹಾಕಲಾಗಿತ್ತು ಎಂದು ಪೋಲೀಸರು ತಿಳಿಸಿದ್ದಾರೆ. ಈ ಮೂಲಕ ಸ್ಥಳೀಯರಲ್ಲಿ ಉಂಟಾಗಿದ್ದ ದೊಡ್ಡ ಆತಂಕಕ್ಕೆ ತೆರೆ ಬಿದ್ದಿದೆ.