ಉಪ್ಪಳ: ಕೇರಳ ರಾಜ್ಯ ಟೈಲರ್ಸ್ ಅಸೋಶಿಯೇಶನ್ (ಕೆ.ಎಸ್.ಟಿ.ಎ) ಉಪ್ಪಳ ಘಟಕದ ಸಮ್ಮೇಳನ ಕೈಕಂಬ ಪಂಚಮಿ ಹಾಲ್ ನಲ್ಲಿನಡೆಯಿತು. ಘಟಕದ ಅಧ್ಯಕ್ಷ ದೇವದಾಸ್ ಬೊಳ್ಳಾರ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಕರಿಪ್ಪಾರ್ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸಮಿತಿ ವೆಲ್ಪೇರ್ ಬೋರ್ಡ್ ಸದಸ್ಯ ಮೋಹನ್ ದಾಸ್ ಕುಂಬಳೆ, ಹಿರಿಯ ನೇತಾರ ಸುಬ್ಬಣ್ಣ ಶೆಟ್ಟಿ, ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ ಆಚಾರ್ಯ ಉಪಸ್ಥಿತÀರಿದ್ದರು. ಈ ಸಂದರ್ಭದಲ್ಲಿ ಹಿರಿಯ ನೇತಾರ ಸುಬ್ಬಣ್ಣ ಶೆಟ್ಟಿಯವರನ್ನು ಶಾಲುಹೊದಿಸಿ ಸನ್ಮಾನಿಸಲಾುತು.
ತಾಲೂಕು ಕಾರ್ಯದರ್ಶಿ ದಯಾನಂದ ಸ್ವಾಗತಿಸಿ, ಘಟಕದ ಪ್ರಧಾನ ಕಾರ್ಯದರ್ಶಿ ಕುಸುಮಾವತಿ ಕೋಡಿಬೈಲ್ ವರದಿ ವಾಚಿಸಿದರು. ಕೋಶಾಧಿಕಾರಿ ಕೇಶವ ಮಯ್ಯ ಲೆಕ್ಕಪತ್ರ ಮಂಡಿಸಿದರು. ವಸಂತ ಶೆಟ್ಟಿ ವಂದಿಸಿದರು.