ಕಾಸರಗೋಡು: ಕಿರಿಯ ಪ್ರಾಥಮಿಕ ಶಾಲಾ ಮಟ್ಟದಿಂದಲೇ ಸಂಸ್ಕøತ ಅಧ್ಯಯನಕ್ಕೆ ಅವಕಾಶ ಮಾಡಿಕೊಡುವಂತೆ ಕೇರಳ ಸಂಸ್ಕøತ ಅಧ್ಯಾಪಕರ ಒಕ್ಕೂಟ(ಕೆಎಸ್‍ಟಿಎಫ್) ಸರ್ಕಾರವನ್ನು ಆಗ್ರಹಿಸಿದೆ. ಕಾಸರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಒಕ್ಕೂಟದ ಜಿಲ್ಲಾ ಸಮ್ಮೇಳನದಲ್ಲಿ ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಶಾಲಾ ಸಭಾಂಗಣದಲ್ಲಿ ನಡೆದ ಸಮ್ಮೇಳನವನ್ನು ಉದುಮ ಶಾಸಕ ಸಿ.ಎಚ್ ಕುಞಂಬು ಉದ್ಘಾಟಿಸಿದರು. ಕೆಎಸ್‍ಟಿಎಫ್ ರಾಜ್ಯಸಮಿತಿ ಕೋಶಾಧಿಕಾರಿ ಸುರೇಶ್‍ಕುಮಾರ್ ಸಿ. ಮುಖ್ಯ ಭಾಷಣ ಮಾಡಿದರು. ಈ ಸಂದರ್ಭ 2022-23ನೇ ಸಾಲಿನಲ್ಲಿ ಸೇವೆಯಿಂದ ನಿವೃತ್ತರಾಗಲಿರುವ ಪಿ.ಎನ್. ಮಧುಸೂಧನನ್ ಹಾಗೂ ಲಕ್ಷ್ಮೀಕಾಂತ್ ಪುಣಿಚಿತ್ತಾಯ ಅವರನ್ನು ಗೌರವಿಸಲಾಯಿತು.
ನಗರಸಭಾ ಸದಸ್ಯೆ ಶ್ರೀಲತಾ ಟೀಚರ್, ವಿವಿಧ ಶಿಕ್ಷಕ ಸಂಘಟನೆ ಪ್ರತಿನಿಧಿಗಳಾದ ಪಿ.ಎಸ್ ಸಂತೋಷ್ ಕುಮಾರ್, ಅಜಿತ್‍ಕುಮಾರ್, ನೌಫಲ್ ಹುದವಿ, ಹರಿಕೃಷ್ಣ ಕೆ.ಟಿ, ಟಿ.ಪಿ ಪದ್ಮಕುಮಾರ್, ನೀಲಮನ ಶಂಕರನ್, ಅರುಣ್ ಕುಮಾರ್ ಕೆ., ರಿಜೇಶ್ ಸಿ. ಶೈಮಾ ಕೆ.ಸಿ, ವೆಂಕಟಕೃಷ್ಣ ಭಟ್ ಉಪಸ್ಥಿತರಿದ್ದರು. ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ರಿಜೇಶ್ ಸಿ. ಅಧ್ಯಕ್ಷ, ಡಾ. ಸುನಿಲ್ ಕುಮಾರ್ ಕೋರೋತ್ ಕಾರ್ಯದರ್ಶಿ, ಮಧೂಶ್ಯಾಂ ಪಿ. ಅವರನ್ನು ಕೋಶಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಯಿತು. ನಂದಕುಮಾರ್ ಸ್ವಾಗತಿಸಿ, ನಿಲಮನ ಉಮಾ ವಂದಿಸಿದರು.