ತಿರುವನಂತಪುರಂ: ರಾಜ್ಯದಲ್ಲಿ ಕೊರೊನಾ ನಿಬಂಧÀಗಳಲ್ಲಿ ಇನ್ನಷ್ಟು ಸಡಿಲಿಕೆಗಳನ್ನು ಘೋಷಿಸಲಾಗಿದೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ. ಮತ್ತಷ್ಟು ರಿಯಾಯಿತಿಗಳನ್ನು ನೀಡಿದರೂ ಕೆಲವು ಜಾಗ್ರತೆಗಳನ್ನು ಪಾಲಿಸಬೇಕು ಎಂದು ಆರೋಗ್ಯ ಸಚಿವಾಲಯ ನಿರ್ದೇಶಿಸಿದೆ.
ಆಫ್‍ಲೈನ್ ತರಗತಿಗಳನ್ನು ಇನ್ನು ಯಾವುದೇ ನಿರ್ಬಂಧಗಳಿಲ್ಲದೆ ನಡೆಸಬಹುದು. ಮರಣೋತ್ತರ ಸಮಾರಂಭಗಳಲ್ಲಿ ಭಾಗವಹಿಸುವವರಿಗೆ ನಿಬಂಧನೆಗಳಿಲ್ಲ. ಸಾರ್ವಜನಿಕ ಸಾರಿಗೆ ಸಾಮಾನ್ಯ ರೀತಿಯಲ್ಲಿರಲಿದೆ. ಆರೋಗ್ಯ ಸಚಿವಾಲಯವು ನೀಡಿರುವ ಹೊಸ ವಿನಾಯಿತಿಗಳಲ್ಲಿ ಶಾಪಿಂಗ್ ಕಾಂಪ್ಲೆಕ್ಸ್‍ಗಳು ಮತ್ತು ಚಿತ್ರಮಂದಿರಗಳಿಗೆ ಪ್ರವೇಶದ ಮೇಲಿನ ನಿರ್ಬಂಧಗಳು ಸೇರಿವೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಎಲ್ಲಾ ಉದ್ಯೋಗಿಗಳು ಹಾಜರಿರಬೇಕು ಎಂದು ಸಚಿವಾಲಯ ಸೂಚಿಸಿದೆ.
ಇದೇ ವೇಳೆ, ನಿರ್ಬಂಧಗಳನ್ನು ಘೋಷಿಸಿದರೂ ಸಹ ಜಾಗರೂಕತೆಯನ್ನು ಕಾಪಾಡಿಕೊಳ್ಳಬೇಕು ಎಂದು ಆರೋಗ್ಯ ಸಚಿವಾಲಯ ಬೊಟ್ಟುಮಾಡಿದೆ. ಕೊರೊನಾ ತಡೆ ಚಟುವಟಿಕೆಗಳನ್ನು ಮುಂದುವರಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ. ತಪಾಸಣೆ, ನಿಗಾ ಮತ್ತು ನಿಯಂತ್ರಣವನ್ನು ಮುಂದುವರಿಸುವಂತೆಯೂ ಸೂಚಿಸಲಾಗಿದೆ.
ಮಾಸ್ಕ್ ಮತ್ತು ಸಾಮಾಜಿಕ ಅಂತರ ಸೇರಿದಂತೆ ಕೊರೋನಾ ಮಾನದಂಡಗಳನ್ನು ಮುಂದುವರಿಸಬೇಕು ಎಂದು ಕೇಂದ್ರವು ನಿನ್ನೆ ಸೂಚಿಸಿತ್ತು. ಕ್ವಾರಂಟೈನ್ ಸೇರಿದಂತೆ ತಪಾಸಣೆ ಮತ್ತು ಇತರ ಚಟುವಟಿಕೆಗಳನ್ನು ಮುಂದುವರಿಸುವಂತೆ ಕೇಂದ್ರವು ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಕೇಂದ್ರ ಸರ್ಕಾರದ ಶಿಫಾರಸಿನ ಮೇರೆಗೆ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಲಿದೆ.