ಕುಂಬಳೆ: ನಾಟ್ಯ ವಿದ್ಯಾಲಯ ಕುಂಬಳೆಯ ವಿದುಷಿಃ ವಿದ್ಯಾಲಕ್ಷ್ಮೀ ಇವರ ಶಿಷ್ಯರಾದ ಸ್ವಾತಿ ಸಂಜಯ್, ಧನ್ಯಾ ರಾಘವ, ಅಶ್ವಿನಿ ಭಟ್, ಸೌಭಾಗ್ಯ, ಶ್ರೀಪಂಚಮಿ ಮತ್ತು ಅಭಿಜ್ಞಾ ಎಂಬವರು ಕರ್ನಾಟಕ ಫ್ರೌಢಶಿಕ್ಷಣ ಮಂಡಳಿ ನಡೆಸಿದ 2021ನೇ ಸಾಲಿನ ನೃತ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.
ಇದರೊಂದಿಗೆ ನಾಟ್ಯ ವಿದ್ಯಾಲಯ ಕುಂಬಳೆ ದ್ವಿತೀಯ ಸಾಲಿನ ನೃತ್ಯ ವಿದ್ವತ್ ನ್ನು ಪೂರೈಸಿದ ಹೆಗ್ಗಳಿಕೆಗೆ ಸಂಸ್ಥೆ ಪಾತ್ರವಾಗಿದೆ. ಈಗಾಗಲೇ ಈ ಸಂಸ್ಥೆಯಿಂದ ವಿದುಷಿಃ ಡಾ.ದಿವ್ಯ ಕುಂಬಳೆ, ವಿದುಷಿಃ ಶ್ರುತಿ, ವಿದುಷಿಃ ಸಂಗೀತಾ ನಾಗೇಶ್ ಮತ್ತು ವಿದುಷಿಃ ಮೇಘನಾ ನೃತ್ಯ ವಿದ್ವತ್ ಗಳಿಸಿಕೊಂಡಿದ್ದಾರೆ.