ಸಮರಸ ಚಿತ್ರಸುದ್ದಿ: ಪೆರ್ಲ: ಕೋವಿಡ್ ಸಂದರ್ಭ ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶಿಷ್ಟ ಸೇವೆ ನಡೆಸಿದ ದಾದಿ ಸ್ವಾತಿಮಹೇಶ್ ಬಜಕೂಡ್ಲು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭ ಮಹಿಳಾ ಮೋರ್ಚಾ ಎಣ್ಮಕಜೆ ಪಂಚಾಯಿತಿ ಸಮಿತಿ ವತಿಯಿಂದ ಅವರ ನಿವಾಸದಲ್ಲಿ ಗೌರವಿಸಲಾಯಿತು. ಜಿಲ್ಲಾ, ಬ್ಲಾಕ್, ಪಂಚಾಯಿತಿ ಸಮಿತಿ ಪದಾಧಿಕಾರಿಗಳಾದ ಪುಷ್ಪಾ ಅಮೆಕ್ಕಳ, ಉಷಾಗಣೇಶ್, ರಾಜೇಶ್ವರೀ ಬಳಕ್ಕ, ಲಲಿತಾಕೇಶವ್ ಉಪಸ್ಥಿತರಿದ್ದರು.