ಸಂಬಂಧದಲ್ಲಿ ಜಗಳ, ವಾದಗಳು ಸಾಮಾನ್ಯ. ಆದರೆ, ಅದೇ ನಡೆಯುತ್ತಿದ್ದರೆ, ಆ ಪ್ರೀತಿಗೆ ಅರ್ಥವಿರುವುದಿಲ್ಲ. ಕೆಲ ಪ್ರೇಮಿಗಳು ಅಥವಾ ದಂಪತಿಗಳು ಸಣ್ಣ ವಿಚಾರಕ್ಕೂ ಜಗಳವಾಡುವುದನ್ನು ಕಂಡಿರುತ್ತೀರಿ. ಇದರಿಂದ, ಅವರ ನಡುವಿನ ಭಾಂಧವ್ಯ ಹಾಗೂ ಸಂತೋಷಕ್ಕೆ ಧಕ್ಕೆ ಉಂಟಾಗುವುದಂತೂ ಸುಳ್ಳಲ್ಲ. ಅದಕ್ಕಾಗಿ ನಾವಿಂದು, ಇಡೀ ದಿನ ಜಗಳವಾಡುವುದನ್ನು ನಿಲ್ಲಿಸಲು ಏನು ಮಾಡಬೇಕು ಎಂಬುದನ್ನು ವಿವರಿಸಿದ್ದೇವೆ. ಈ ಸಲಹೆಗಳಿಂದ ಅವರು ತಮ್ಮ ನಡುವಿನ ಘರ್ಷಣೆಯನ್ನು ಕಡಿಮೆ ಮಾಡಬಹುದು.
ಹೆಚ್ಚು ಜಗಳವಾಡುವ ದಂಪತಿಗಳಿಗೆ, ಅದನ್ನ ಕಡಿಮೆ ಮಾಡಲು ಕೆಲವು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:
ಮೆಸೇಜ್ ಮೂಲಕ ಜಗಳವಾಡುವುದು ನಿಲ್ಲಿಸಿ: ನೀವು ಕೋಪ ಮಾಡಿಕೊಂಡು ನಿಮ್ಮ ಸಂಗಾತಿಯಿಂದ ದೂರಹೋದಾಗ ಮೆಸೇಜ್ ಮೊರೆಹೋಗುವುದು ಸಾಮಾನ್ಯ. ಆದಾಗ್ಯೂ, ನಿಮ್ಮ ಸಂಗಾತಿಯನ್ನು ಅವಮಾನಿಸುವ ಸಂದೇಶಗಳನ್ನು ಕಳುಹಿಸುವುದು ಸರಿಯಲ್ಲ. ಈ ಮೂಲಕ ಜಗಳ ಮತ್ತಷ್ಟು ಹೆಚ್ಚಾಗುವುದು, ತೀವ್ರ ಸ್ವರೂಪ ಪಡೆದುಕೊಳ್ಳುವುದು. ಮೆಸೇಜ್ ಬದಲಾಗಿ, ವಿಷಯಗಳನ್ನು ಮಾತನಾಡಲು ವೈಯಕ್ತಿಕವಾಗಿ ಭೇಟಿ ಮಾಡಿ, ನೇರವಾಗಿ ಮಾತನಾಡಿ ಪರಿಹರಿಸಿಕೊಳ್ಳಿ.
ಬೈಗುಳದ ಸುರಿಮಳೆ ಸುರಿಸುವ ಮೊದಲು, ಅರೆಕ್ಷಣ ಯೋಚಿಸಿ: ಯಾರಾದರೂ ನಿಮಗೆ ಅನ್ಯಾಯ ಮಾಡಿದ್ದಾರೆಂದು ನಿಮಗೆ ಅನಿಸಿದಾಗ ಅವರೊಂದಿಗೆ ಘೋರವಾದ ಪದಗಳ ಯುದ್ಧ ಮಾಡುವುದು ಆಹ್ಲಾದಕರವಾಗಿರುತ್ತದೆ. ಆದರೆ ನಾವು ಹೇಳುವ ಕೆಲವು ಪದಗಳನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ. ಮಾತು ಆಡಿದರೇ ಹೋಯಿತು ಎಂಬ ಮಾತೇ ಇದೆ. ಇವು ನಿಮ್ಮ ಸಂಬಂಧಕ್ಕೆ ಸರಿಪಡಿಸಲಾಗದ ಹಾನಿ ಉಂಟುಮಾಡಬಹುದು. ಆದ್ದರಿಂದ, ನಿಮ್ಮ ತಲೆಯಲ್ಲಿರುವ ವಾಕ್ಯವನ್ನು ಹೇಳುವ ಮುನ್ನ ಕೆಲವು ಸೆಕೆಂಡುಗಳಾದರೂ ಯೋಚಿಸಿ.
ಕೆಲವೊಮ್ಮೆ ವಾದವನ್ನು ತಪ್ಪಿಸಲು ಮಲಗುವುದೇ ಒಳಿತು: ನೀವು ಎಂದಿಗೂ ಕೋಪದಲ್ಲಿ ನಿದ್ದೆ ಮಾಡಬಾರದು, ನಿಮ್ಮ ಸಂಗಾತಿಯೊಂದಿಗೆ ವಿಷಯವನ್ನು ಸರಿಪಡಿಸಿಕೊಂಡು ಮಲಗಬೇಕು ಎಂದು ಹೇಳುವುದನ್ನು ಕೇಳಿರುತ್ತೀರಿ. ಆದಾಗ್ಯೂ, ಜಗಳದ ಸಮಯದಲ್ಲಿ ಅದು ತಣ್ಣಗಾಗಲು ಮಲಗುವುದು ಅಥವಾ ದೂರ ಹೋಗುವುದು ಸಂಪೂರ್ಣವಾಗಿ ಸರಿಯಾದ ನಿರ್ಧಾರ. ಹೀಗೆ ಮಾಡುವುದರಿಂದ, ನಿಮ್ಮ ಸಂಗಾತಿಯನ್ನು ನೋಯಿಸಬಹುದಾದ ಮಾತುಗಳಿಂದ ನಿಮ್ಮನ್ನು ತಡೆಯಬಹುದು. ಕೆಲವೊಮ್ಮೆ ಮರುದಿನ ಎದ್ದಾಗ ನಿಮಗೆ ಹೊಸ ದೃಷ್ಟಿಕೋನವನ್ನು ನೀಡುತ್ತದೆ ಏಕೆಂದರೆ ಕೋಪವು ಕಡಿಮೆಯಾಗಿರುತ್ತದೆ.
ನಿಮ್ಮ ಭಾವನೆಗಳನ್ನು ವಿವರಿಸಲು ಪ್ರಯತ್ನಿಸಿ, ನಿಮ್ಮ ಸಂಗಾತಿಗೆ ಮನಸ್ಸನ್ನು ಓದಲಾಗುವುದಿಲ್ಲ: ನಿಮ್ಮ ಸಮಸ್ಯೆಯನ್ನು ಪರಿಹರಿಸಲು ಉತ್ತಮ ಮಾರ್ಗವೆಂದರೆ ಅದು ನಿಮ್ಮನ್ನು ಏಕೆ ಕಾಡುತ್ತಿದೆ ಎಂಬುದನ್ನು ವಿವರಿಸುವುದು. ನಿಮ್ಮ ಸಂಗಾತಿಯು ನಿಮ್ಮನ್ನು ತುಂಬಾ ಪ್ರೀತಿಸುತ್ತಿದ್ದರೂ ಸಹ, ಅವರು ನಿಮ್ಮ ಮನಸ್ಸಿನ ಆಂತರಿಕ ಕಾರ್ಯಗಳು ಮತ್ತು ನಿಮ್ಮ ಭಾವನೆಗಳ ಬಗ್ಗೆ ತಿಳಿದಿರುವುದಿಲ್ಲ. ಅವುಗಳನ್ನು ಎಚ್ಚರಿಕೆಯಿಂದ ತಿಳಿಸಲು ಮತ್ತು ಅರ್ಥ ಮಾಡಿಸಲು ಪದಗಳನ್ನು ಬಳಸಿ.