ತಿರುವನಂತಪುರ: ರಾಜ್ಯದಲ್ಲಿ ಬೇಸಿಗೆಯ ಬೆನ್ನಿಗೇ ಜಲ ಪ್ರಾಧಿಕಾರವು ನೀರಿನ ದರವನ್ನು ಹೆಚ್ಚಿಸಿದೆ. ಶುಕ್ರವಾರದಿಂದಲೇ ಹೊಸ ದರಗಳು ಜಾರಿಗೆ ಬರಲಿವೆ. ಮೂಲ ದರದಿಂದ ಶೇಕಡ ಐದರಷ್ಟು ಹೆಚ್ಚಳವಾಗಲಿದೆ.
ಏರಿಕೆ ಜಾರಿಗೆ ಬರುವುದರಿಂದ 1000 ಲೀಟರ್‌ಗೆ 4 ರೂ.41 ಪೈಸೆ ಪಾವತಿಸಬೇಕಾಗುತ್ತದೆ. ಈಗಿನ ದರ ನಾಲ್ಕು ರೂಪಾಯಿ 20 ಪೈಸೆ. ಗೃಹೇತರ ಗ್ರಾಹಕರು ಈ ಹಿಂದೆ 1,000 ಲೀಟರ್‌ಗೆ 15 ರೂ.75 ಪೈಸೆ ನೀಡಬೇಕಿತ್ತು. ಇನ್ನು ಮುಂದೆ 16 ರೂಪಾಯಿ 54 ಪೈಸೆ ಕೊಡಬೇಕು. ಕೈಗಾರಿಕಾ ಸಂಪರ್ಕಗಳಿಗೆ ಪರಿಷ್ಕೃತ ದರ 1,000 ಲೀಟರ್‌ಗೆ 44.10 ರೂ.ಆಗಲಿದೆ.
ಗೃಹ, ಗೃಹೇತರ ಮತ್ತು ಕೈಗಾರಿಕಾ ಸಂಪರ್ಕಗಳ ಎಲ್ಲಾ ಸ್ಲ್ಯಾಬ್‌ಗಳಲ್ಲಿ ಶೇ.5 ರಷ್ಟು ಹೆಚ್ಚಳವನ್ನು ಜಲ ಪ್ರಾಧಿಕಾರ ನಿಗದಿಪಡಿಸಿದೆ. ಪ್ರಸ್ತುತ 5000 ಲೀಟರ್ ನೀರಿಗೆ 21 ರೂ.ಇದ್ದದ್ದು ಇನ್ನು 22.05 ರೂ. ಆಗಲಿದೆ. ತಿಂಗಳಿಗೆ 10,000 ಲೀಟರ್‌ಗಿಂತ ಹೆಚ್ಚಿನ ಬಳಕೆಗೆ ಏಳು ಸ್ಲ್ಯಾಬ್‌ಗಳ ಆಧಾರದ ಮೇಲೆ ಬಿಲ್‌ನಲ್ಲಿ ಶೇಕಡಾ ಐದು ಹೆಚ್ಚಳವಾಗಲಿದೆ. ತಿಂಗಳಿಗೆ 15,000 ಲೀಟರ್ ವರೆಗೆ ಬಳಸುವ ಬಿಪಿಎಲ್ ಕುಟುಂಬಗಳಿಗೆ ಉಚಿತ ಪೂರ್ಯೆಕೆ ಮುಂದುವರಿಯುತ್ತದೆ.