ತಳಿಪರಂಬ: ಕಣ್ಣೂರಿನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಕಣ್ಣೂರಿನ ಧರ್ಮಶಾಲಾದಲ್ಲಿರುವ ಸ್ನೇಕ್ ಪಾರ್ಕ್ ಬಳಿಯ ಅಫ್ರಾ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಂದು ಬೆಳಗ್ಗೆ ಈ ಅವಘಡ ಸಂಭವಿಸಿದ್ದು, ಪ್ಲೈವುಡ್ ಸಂಪೂರ್ಣ ಸುಟ್ಟು ಕರಕಲಾಗಿದೆ.ಕಾರ್ಖಾನೆಯ ಬಹುತೇಕ ಭಾಗ ಸುಟ್ಟು ಕರಕಲಾಗಿದೆ ಎಂದು ವರದಿಯಾಗಿದೆ.
ಕಣ್ಣೂರು, ತಳಿಪರಂಬ, ಪಯ್ಯನ್ನೂರು ಮತ್ತು ಪೆರಿಂಗೋಮ್‌ನಿಂದ 10ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಹತೋಟಿಗೆ ತರಲಾಗುತ್ತಿದೆ.