ನವದೆಹಲಿ: ಸ್ವಾಯತ್ತ ವಿಶ್ವವಿದ್ಯಾಲಯಗಳು ಹಾಗೂ ಖಾಸಗಿ ವೈದ್ಯಕೀಯ ಕಾಲೇಜಿನ ಶೇಕಡ 50 ಸೀಟುಗಳಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ವಿಧಿಸಲಾಗುವ ಶುಲ್ಕವನ್ನೇ ವಿಧಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ನವದೆಹಲಿ: ಸ್ವಾಯತ್ತ ವಿಶ್ವವಿದ್ಯಾಲಯಗಳು ಹಾಗೂ ಖಾಸಗಿ ವೈದ್ಯಕೀಯ ಕಾಲೇಜಿನ ಶೇಕಡ 50 ಸೀಟುಗಳಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ವಿಧಿಸಲಾಗುವ ಶುಲ್ಕವನ್ನೇ ವಿಧಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಸರ್ಕಾರ ಇಂಥದ್ದೊಂದು ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಟ್ವಿಟರ್ನಲ್ಲಿ ಪ್ರಕಟಿಸಿದ್ದಾರೆ.
ಇದರ ಪ್ರಕಾರ ಖಾಸಗಿ ಕಾಲೇಜಿನ ಶೇ.50 ಸೀಟುಗಳ ಶುಲ್ಕಗಳು ಆಯಾ ರಾಜ್ಯಗಳ ಸರ್ಕಾರಿ ವೈದ್ಯಕೀಯ ಕಾಲೇಜಿನ ಶುಲ್ಕಕ್ಕೆ ಸಮಾನವಾಗಿರಬೇಕು. ಒಂದು ವೇಳೆ ಡೀಮ್್ಡ ವಿವಿ ಅಥವಾ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಕ್ಕೆ ನೀಡಲಾಗಿರುವ ಅಥವಾ ಸರ್ಕಾರದಿಂದ ಹಂಚಿಕೆಯಾಗುವ ಸೀಟುಗಳ ಸಂಖ್ಯೆ ಶೇ.50ಕ್ಕಿಂತ ಕಡಿಮೆ ಇದ್ದಲ್ಲಿ ಈ ಪೈಕಿ ಇನ್ನುಳಿದ ಖಾಸಗಿ ಕೋಟಾದ ಸೀಟುಗಳಿಗೂ ಸರ್ಕಾರಿ ಶುಲ್ಕವನ್ನೇ ಪಡೆಯತಕ್ಕದ್ದು. ಇದನ್ನು ಮೆರಿಟ್ ಆಧಾರದ ವಿದ್ಯಾರ್ಥಿಗಳಿಗೆ ನೀಡಬೇಕು ತಿಳಿಸಲಾಗಿತ್ತು.