ಕಾಸರಗೋಡು: ಜಿಲ್ಲಾಡಳಿತ, ಕಾನೂನು ನೆರವು ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಹಿಳಾ ರಕ್ಷಣಾ ಕಛೇರಿ ಇವರ ಸಂಯುಕ್ತ ಆಶ್ರಯದಲ್ಲಿ ‘ಚೆರ್ಚಾ’ ವಿವಾಹ ಪೂರ್ವ ಕೌನ್ಸಿಲಿಂಗ್ ಕೋರ್ಸ್ ನಡೆಸಲಾಯಿತು. ಮಾರ್ಚ್ 21 ರ ಸೋಮವಾರ ಉಪನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ನೆರವು ಪ್ರಾಧಿಕಾರದ ಕಾರ್ಯದರ್ಶಿ ಎಂ.ಎಸ್. ಸುಹೈಬ್ ಕಾರ್ಯಕ್ರಮ ಉದ್ಘಾಟಿಸಿದ್ದರು.
ಕಾಲಿಚ್ಚಾನಡ್ಕ ಎಸ್‍ಎನ್‍ಡಿಪಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಾಲ್ಕು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಆರು ತಿಂಗಳಲ್ಲಿ ವಿವಾಹವಾಗಲಿರುವ 45 ಯುವಕ-ಯುವತಿಯರಿಗೆ ತರಗತಿ ನೀಡಲಾಯಿತು.
ಉಪನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ನೆರವು ಪ್ರಾಧಿಕಾರದ ಕಾರ್ಯದರ್ಶಿ ಎಂ.ಎಸ್. ಸುಹೈಬ್ ತರಗತಿ ನಡೆಸಿದರು. ವೆಳ್ಳಿಕ್ಕೋತ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕ ಎನ್.ಶಿಲ್ಜಿ ಅವರು ಆರ್ಥಿಕ ಸಾಕ್ಷರತೆ ಮತ್ತು ಕುಟುಂಬ ಬಜೆಟ್ ಕುರಿತು ತರಗತಿ ನೀಡಿದರು. ಸೈಬರ್ ಸೆಲ್ ಉಪನಿರೀಕ್ಷಕ ಪಿ.ಕೆ.ಅಜಿತ್ ಅವರು ಸೈಬರ್ ಸೆಲ್ ನಿರ್ಲಕ್ಷ್ಯ ಮತ್ತು ಇಂಟರ್ ನೆಟ್ ಬಳಕೆಯ ಸಮಸ್ಯೆಗಳ ಕುರಿತು ಹಾಗೂ ಅಬಕಾರಿ ತಡೆ ಅಧಿಕಾರಿ ಎನ್.ಜಿ.ರಘುನಾಥನ್ ಅವರು ಮದ್ಯ ಮತ್ತು ಮಾದಕ ದ್ರವ್ಯಗಳ ಕುರಿತು ಮಾರ್ಗದರ್ಶನ ನೀಡಿದರು.
ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜಾನ್ ಕೆ. ಜಾನ್, ಮೇಲ್ವಿಚಾರಕಿ ಎಸ್. ಲೈಲಾ, ಹೊಸದುರ್ಗ ತಾಲೂಕು ಕಾನೂನು ಸೇವಾ ಸಮಿತಿ, ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳ ವಿಷಯದ ಕುರಿತು ತರಗತಿ ನೀಡಿದರು. ಸುರೇಶ್ ಕುಮಾರ್ ಮತ್ತಿತರರು ವಿವಿಧ ವಿಷಯಗಳ ಮಾಹಿತಿ ತರಗತಿ ನೀಡಿದರು. ಹೊಸದುರ್ಗ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಸಿ.ಎಸ್. ಸುರೇಶ್ ಕುಮಾರ್ ಪ್ರಮಾಣ ಪತ್ರ ವಿತರಿಸಿದರು.
ವರದಕ್ಷಿಣೆ ಕೌಟುಂಬಿಕ ಹಿಂಸಾಚಾರ, ಆತ್ಮಹತ್ಯೆ, ಮರ್ಯಾದಾ ಹತ್ಯೆ, ಪ್ರೇಮದ ಪ್ರತೀಕಾರದ ಹಿಂದೆ ಇರುವ ವರ್ತನೆಯ ವಿಕಲತೆ, ಮಾನಸಿಕ ಅಸ್ವಸ್ಥತೆ, ಐಷಾರಾಮಿ ಜೀವನಕ್ಕೆ ಒಲವು, ಗ್ರಾಹಕ ಸಂಸ್ಕøತಿಯ ಬಗ್ಗೆ ಸಮಾಲೋಚನೆ ಅಗತ್ಯವಿರುವುದರಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.