ಕಾಸರಗೋಡು: ರಾಜ್ಯ ಸಾಕ್ಷರತಾ ಮಿಷನ್ ಜಾರಿಗೊಳಿಸಿರುವ ಹತ್ತನೇ ಹಾಗೂ ಹೈಯರ್ ಸೆಕೆಂಡರಿ ಸಮಾಂತರ ಕೋರ್ಸ್‍ಗಳ ಹೊಸ ಬ್ಯಾಚ್ ನೋಂದಣಿಯನ್ನು ಏಪ್ರಿಲ್ 10 ರ ವರೆಗೆ ನಡೆಸಬಹುದಾಗಿದೆ.
7ನೇ ತರಗತಿಯಲ್ಲಿ ಉತ್ತೀರ್ಣರಾದವರು ಮತ್ತು ಸಾಕ್ಷರತಾ ಮಿಷನ್ 7ನೇ ತರಗತಿಯಲ್ಲಿ ಉತ್ತೀರ್ಣರಾದವರು ಹತ್ತನೇ ತರಗತಿಗೆ ನೋಂದಾಯಿಸಿಕೊಳ್ಳಬಹುದು. ಪ್ರಾಯಮಿತಿ 17ವರ್ಷ ಆಗಿದೆ. ಔಪಚಾರಿಕ ಶಿಕ್ಷಣದಲ್ಲಿ ಹತ್ತನೇ ತರಗತಿ ಅಥವಾ ಹತ್ತನೇ ಸಮಾಂತರ ತರಗತಿ ಉತ್ತೀರ್ಣರಾದವರಿಗೆ ಹೈಯರ್ ಸೆಕೆಂಡರಿ ನುತ್ತೀರ್ಣರಾದವರು ಹೈಯರ್ ಸೆಕೆಂಡರಿ ಸಮಾನತೆ ಕೋರ್ಸ್‍ಗೂ ಅರ್ಜಿ ಸಲ್ಲಿಸಬಹುದು. 22 ವರ್ಷ ಮೇಲ್ಪಟ್ಟವರಾಗಿರಬೇಕು. ತೃತೀಯ ಲಿಂಗಿಗಳು, ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳಿಗೆ ಶುಲ್ಕವನ್ನು ಮನ್ನಾ ಮಾಡಲಾಗಿದೆ. ಹತ್ತನೇ ತರಗತಿ ನೋಂದಣಿ ಶುಲ್ಕ ನೂರು ರೂ. ಕೋರ್ಸ್ ಶುಲ್ಕ ರೂ. 1750, ಹೈಯರ್ ಸೆಕೆಂಡರಿ ನೋಂದಣಿ ಶುಲ್ಕ 300ರೂ. ಕೋರ್ಸ್ ಶುಲ್ಕ 2200ರೂ. ನಿಗದಿಪಡಿಸಲಾಗಿದೆ. ಪ್ರತಿ ರಜಾದಿನಗಳಲ್ಲಿ ತರಗತಿಗಳು ನಡೆಯಲಿದೆ. ಉದ್ಯೋಗದಲ್ಲಿರುವವರೂ ಅರ್ಜಿ ಸಲ್ಲಿಸಬಹುದಾಗಿದೆ. ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ವೆಬ್‍ಸೈಟ್ ತಿತಿತಿ.ಟiಣeಡಿಚಿಛಿಥಿmissioಟಿಞeಡಿಚಿಟಚಿ.oಡಿg ದೂರವಾಣಿ 04994 255507, 8281175355, 8848858503.ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.