HEALTH TIPS

ಯೂಕ್ರೇನ್ ಬಿಕ್ಕಟ್ಟು, ಆರ್ಥಿಕ ಇಕ್ಕಟ್ಟು

             ರಷ್ಯಾ ಮತ್ತು ಯೂಕ್ರೇನ್ ಬಿಕ್ಕಟ್ಟು ಜಾಗತಿಕ ಸರಕು ಪೇಟೆಯಲ್ಲಿ ಆತಂಕವನ್ನು ಮೂಡಿಸಿದೆ. ಪರಿಣಾಮ ಆಹಾರ ವಸ್ತುಗಳ ದರ ಮತ್ತು ಕೃಷಿ ಉತ್ಪಾದನಾ ವೆಚ್ಚ ಏರುವ ಭೀತಿ ಹೆಚ್ಚಿಸಿದೆ. ಭಾರತದಲ್ಲೂ ಇದರ ಪರಿಣಾಮ ಆಗುತ್ತಿದ್ದು, ಶೀಘ್ರದಲ್ಲೇ ಹಣದುಬ್ಬರ ಪ್ರಮಾಣ ಎರಡಂಕಿ ತಲುಪಲಿದೆ.


            ಧಾನ್ಯ ದಾಸ್ತಾನು ರಕ್ಷಣೆಯಾದೀತೆ?: ಫೆಬ್ರವರಿ ಮಧ್ಯಭಾಗದ ದತ್ತಾಂಶ ಪ್ರಕಾರ, ಕೇಂದ್ರ ಸರ್ಕಾರದ ಬಳಿ ಗೋಧಿ ಮತ್ತು ಅಕ್ಕಿಯ ದಾಸ್ತಾನು 54 ದಶಲಕ್ಷ ಟನ್ ಇದೆ. ಇದು ದೇಶದ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಬೇಡಿಕೆಯ ನಿಶ್ಚಿತ ಪ್ರಮಾಣಕ್ಕಿಂತ 30 ದಶಲಕ್ಷ ಟನ್ ಹೆಚ್ಚಿದೆ. ಒಂದೊಮ್ಮೆ ಯೂಕ್ರೇನ್ ಬಿಕ್ಕಟ್ಟು ತೀವ್ರಗೊಂಡರೆ ಭಾರತ ಬೆಲೆ ಏರಿಕೆಯನ್ನು ನಿಯಂತ್ರಿಸುವ ಸಲುವಾಗಿ ಗೋಧಿಯನ್ನು ರಫ್ತು ಮಾಡಬೇಕಾಗಿ ಬರಬಹುದು. ಹೀಗೆ ಮಾಡಿದರೆ ಹಣದುಬ್ಬರ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ.

  ಭಾರತಕ್ಕೂ ತೊಂದರೆ              ಸಾಧ್ಯತೆ: ಉತ್ಪಾದನೆ ಮತ್ತು ವ್ಯಾಪಾರದ ಶಕ್ತಿ ಕೇಂದ್ರವಾದ ಕಪುಪ ಸಮುದ್ರ ಭಾಗದಲ್ಲಿ ಸ್ಪೋಟಗೊಂಡ ಯುದ್ಧವು ಕಚ್ಚಾತೈಲ, ಗೋಧಿ, ಜೋಳ, ಅಡುಗೆ ಎಣ್ಣೆ, ರಸಗೊಬ್ಬರಗಳ ಬೆಲೆಯನ್ನು ಗಗನಮುಖಿಯಾಗಿಸಿದೆ. ಕಚ್ಚಾತೈಲ ದರ ಸೋಮವಾರ ಪ್ರತಿ ಬ್ಯಾರೆಲ್​ಗೆ 139 ಡಾಲರ್ ತಲುಪಿತ್ತು. ಇದು 2008ರಿಂದೀಚೆಗೆ ಗರಿಷ್ಠ ಮಟ್ಟವಾಗಿತ್ತು. ಜಾಗತಿಕವಾಗಿ ವರ್ಷದಿಂದ ವರ್ಷದ ಲೆಕ್ಕಾಚಾರದಲ್ಲಿ ಗೋಧಿ ಬೆಲೆ ಶೇಕಡ 91, ಕಾರ್ನ್ ಬೆಲೆ ಶೇಕಡ 33 ಏರಿಕೆಯಾಗಿದೆ. ಖಾದ್ಯ ತೈಲ, ರಸಗೊಬ್ಬರಕ್ಕಾಗಿ ಭಾರತ ಆಮದನ್ನೇ ನೆಚ್ಚಿಕೊಂಡಿದೆ. ಹೀಗಾಗಿ ಭಾರತದಲ್ಲಿ ಗ್ರಾಹಕರು ಬೆಲೆ ಏರಿಕೆಯ ನೋವನ್ನು ಅನುಭವಿಸಬೇಕಾಗುತ್ತದೆ. ಖಾರಿಫ್ ಬಿತ್ತನೆ ಸೀಸನ್​ನಲ್ಲಿ ರಸಗೊಬ್ಬರದ ಕೊರತೆಯೂ ಗ್ರಾಮೀಣ ಭಾರತವನ್ನು ಕಾಡಲಿದೆ.

            ಕಚ್ಚಾ ತೈಲ ಗಗನಕ್ಕೆ: ಕಚ್ಚಾತೈಲ ಬೆಲೆ ಮತ್ತು ಆಹಾರ ದರಗಳ ನಡುವೆ ನೇರ ಸಂಬಂಧ ಇರುವುದು ಐತಿಹಾಸಿಕ ದತ್ತಾಂಶಗಳ ಮೂಲಕ ದೃಢಪಟ್ಟಿದೆ. ಕಚ್ಚಾತೈಲ ಬೆಲೆ ಏರಿದರೆ ಆಹಾರ ದರ ಕೂಡ ಏರಿಕೆಯಾಗುತ್ತದೆ. ಸದ್ಯ ಕಚ್ಚಾತೈಲ ದರ ಪ್ರತಿ ಬ್ಯಾರೆಲ್​ಗೆ 130 ಡಾಲರ್ ಆಸುಪಾಸಿನಲ್ಲಿದೆ. ಇದು 100-110 ಡಾಲರ್​ಗೆ ಇಳಿದರೂ, ರಸಗೊಬ್ಬರ ಮತ್ತು ಶಿಪ್ಪಿಂಗ್ ವೆಚ್ಚವನ್ನು ಹೆಚ್ಚಿಸಲಿದೆ. ಇದು ಆಹಾರದ ಹಣದುಬ್ಬರ ಏರಿಕೆಗೆ ಕಾರಣವಾಗುತ್ತದೆ.

           ಕೃಷಿ ಮೇಲೆ ಪರಿಣಾಮ: ಉತ್ಪಾದನಾ ವೆಚ್ಚ ಹೆಚ್ಚುವ ಕಾರಣ ಅದಕ್ಕೆ ತಕ್ಕಂತೆ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಏರಿಕೆಯನ್ನು ಕೃಷಿಕರು ಬಯಸುತ್ತಾರೆ. ಸರ್ಕಾರ ಕೂಡ ಕೃಷಿ ಉತ್ಪಾದನಾ ವೆಚ್ಚ ಒಂದೂವರೆ ಪಟ್ಟು ಕನಿಷ್ಠ ಬೆಂಬಲ ಬೆಲೆ ನೀಡುವ ಪರಿಪಾಠವನ್ನು ಇತ್ತೀಚಿನ ವರ್ಷಗಳಲ್ಲಿ ಅನುಸರಿಸುತ್ತ ಬಂದಿದೆ. ಇದೇ ವೇಳೆ, ಬೆಲೆ ಏರಿಕೆ ಕೂಡ ಆಗುವ ಕಾರಣ ಕೃಷಿಕರಿಗೆ ಪ್ರಯೋಜನವಾಗಲಿದೆ. ಸದ್ಯ ಸಾಸಿವೆ ಬೆಲೆ ಕ್ವಿಂಟಾಲ್​ಗೆ 7000 ರೂಪಾಯಿ ಇದ್ದು, 10,000 ರೂ. ಗಡಿದಾಟುವ ಸಾಧ್ಯತೆ ಇದೆ. ಇದರಂತೆ ಉಳಿದವುಗಳ ಬೆಲೆಯೂ ಏರಿಕೆಯಾಗಲಿದೆ.

ಸರ್ಕಾರ ಯಾವ ಕ್ರಮ ತೆಗೆದುಕೊಳ್ಳಬಹುದು?: ಧಾನ್ಯಗಳ ಸಾರ್ವಜನಿಕ ದಾಸ್ತಾನು ಹೆಚ್ಚಿಸುವುದು, ರಫ್ತು ನಿರ್ಬಂಧ ಹೇರುವುದು ಮುಂತಾದ ಕ್ರಮಗಳ ಮೂಲಕ ಬೆಲೆ ಏರಿಕೆ ನಿಯಂತ್ರಿಸಬಹುದು. ಈಗಾಗಲೇ ಚಿಲ್ಲರೆ ಆಹಾರ ಹಣದುಬ್ಬರ ಪ್ರಮಾಣ ಶೇಕಡ 5.4ಕ್ಕೆ ಏರಿದೆ. ಇದು 13 ತಿಂಗಳ ಅವದಿಯಲ್ಲಿ ಗರಿಷ್ಠ ಮಟ್ಟ. ಇನ್ನು ರಸಗೊಬ್ಬರಕ್ಕಾಗಿ ಭಾರತವು ಕೆನಡಾ, ಚೀನಾ, ಇಸ್ರೇಲ್​ಗಳನ್ನು ನೆಚ್ಚಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries