ಕೀವ್: ಉಕ್ರೇನ್ ಮೇಲೆ ದಾಳಿ ನಡೆಸಿರುವ ರಷ್ಯಾ ಇತ್ತೀಚಿಗಷ್ಟೆ ದೇಶದ ಪರಮಾಣು ಸ್ಥಾವರದ ಬಳಿ ಬಾಂಬ್ ದಾಳಿ ನಡೆಸಿತ್ತು. ಇದು ಜಗತ್ತಿನಾದ್ಯಂತ ಆತಂಕಕ್ಕೆ ಕಾರಣವಾಗಿತ್ತು. ವಿಕಿರಣ ಸೋರಿಕೆಯ ಭೀತಿ ಕಾಡಿತ್ತು.
ಪರಮಾಣು ಸ್ಥಾವರ ಮೇಲಿನ ದಾಳಿ ಖಂಡಿಸಿದ್ದ ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ, ಒಂದು ವೇಳೆ ವಿಕಿರಣ ಸೋರಿಕೆಯಾದರೆ ಇಡೀ ಯುರೋಪ್ ಖಂಡ ಅಂತ್ಯವಾಗುತ್ತದೆ ಎಂದಿದ್ದರು.
ಇದೀಗ ದಾಳಿಯಿಂದಾಗಿ ವಿಕಿರಣ ಸೋರಿಕೆಯಾಗಿಲ್ಲ ಎಂದು ವಿಶ್ವಸಂಸ್ಥೆ ಖಚಿತ ಪಡಿಸಿದೆ. ಅಲ್ಲದೆ ಉಕ್ರೇನ್ ವಿಕಿರಣ ಕೇಂದ್ರ ಕೂಡಾ ವಿಕಿರಣ ಪ್ರಮಾಣದಲ್ಲಿ ಏರಿಕೆ ಕಂಡುಬಂದಿಲ್ಲ ಎಂದು ಹೇಳಿವೆ.