ಏಪ್ರಿಲ್-ಮೇ ತಿಂಗಳಿನಲ್ಲಿ ಬಿಸಿಲಿನ ಉರಿ ಮತ್ತಷ್ಟು ತೀಕ್ಷ್ಣವಾಗಿರುತ್ತೆ. ಇದರ ಪರಿಣಾಮ ನಮ್ಮ ತ್ವಚೆ ಹಾಗೂ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುತ್ತೆ. ಅದರಲ್ಲೂ ಮೈ ತುಂಬಾ ಬೆವರುತ್ತಿದ್ದರೆ ಮೈಯಲ್ಲಿ ಚಿಕ್ಕ-ಚಿಕ್ಕ ಕಜ್ಜಿ ಏಳುವುದು, ಇದನ್ನು ಹೀಟ್ ರ‍್ಯಾಶಸ್ ಎಂದು ಕರೆಯಲಾಗುವುದು.
ಮೈಯಲ್ಲಿ ಸೆಕೆ ಗುಳ್ಳೆಗಳು/ಬೆವರು ಕಜ್ಜಿ ಎಲ್ಲಿ ಬೇಕಾದರೂ ಏಳಬಹುದು, ಹೆಚ್ಚಾಗಿ ಬೆನ್ನು, ಕುತ್ತಿಗೆ , ಕಂಕುಳ ಈ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಉಷ್ಣಾಂಶ ತುಂಬಾ ಅಧಿಕವಿರುವ ಕಡೆ ಸೆಕೆ ಗುಳ್ಳೆಗಳು ಬರುವುದು. ಕೆಲು ಕಡೆಯಲ್ಲಿ ಉಷ್ಣಾಂಶ 50 ಡಿಗ್ರಿ Cನಷ್ಟು ಇರುತ್ತದೆ. ಅದರಲ್ಲೂ ಮಕ್ಕಳಲ್ಲಿ ಸೆಕೆ ಗುಳ್ಳೆಗಳು ಬಂದರೆ ಅವರು ಅದನ್ನು ತುರಿಸಿ ಅವರು ಗಾಯ ಮಾಡುತ್ತಾರೆ.
ಆಯಿಂಟ್ಮೆಂಟ್
ಡಾಕ್ಟರ್ ನಿಮಗೆ ಕಲಾಮೈನ್ ಲೋಷನ್ ಹಚ್ಚಲು ಹೇಳಬಹುದು. ಇದನ್ನು ಹಚ್ಚುವುದರಿಂದ ತುರಿಕೆ ಕಡಿಮೆಯಾಗುವುದು. ಅವಶ್ಯ ಬಿದ್ದರೆ 3-4 ಗಂಟೆಗೊಮ್ಮೆ ಹಚ್ಚಿ ಇದು ಬೆವರು ಕಜ್ಜಿ ಕಡಿಮೆ ಮಾಡಲು ಸಹಾಯ ಮಾಡುತ್ತೆ.
Antihistamines ತೆಗೆದುಕೊಳ್ಳುವುದರಿಂದಲೂ ಬೆವರು ಕಜ್ಜಿ ಕಡಿಮೆಯಾಗುವುದು, ಆದರೆ ಮಕ್ಕಳಿಗೆ ನೀಡುವ ಮುನ್ನ ಮಕ್ಕಳ ತಜ್ಞರ ಸಲಹೆ ಪಡೆಯಬೇಕು.
ಸ್ಟಿರಾಯ್ಡ್ ಕ್ರೀಮ್ಸ್
Hydrocortisone ಎಂಬ ಕ್ರೀಮ್ ಸಿಗುತ್ತೆ, ಇದು ಕೂಡ ಬೆವರು ಕಜ್ಜಿ ಹಾಗೂ ತುರಿಕೆ ಕಡಿಮೆ ಮಾಡಲು ಸಹಕಾರಿ. ಇದನ್ನು ತಂದು ದಿನದಲ್ಲಿ ಎರಡು ಬಾರಿ ಹಚ್ಚುತ್ತಿದ್ದರೆ ತುರಿಕೆ ಕಡಿಮೆಯಾಗುವುದು.
ಆದರೆ ಇದನ್ನು ಮಕ್ಕಳಿಗೆ ಡಯಾಪರ್ ಕೆಳಗಡೆ ಹಚ್ಚಬೇಡಿ.
ಬೆವರು ಕಜ್ಜಿ ಸಮಸ್ಯೆಗೆ ಮನೆಮದ್ದು
ಬೆವರು ಕಜ್ಜಿ ಕಡಿಮೆ ಮಾಡಲು ಅನೇಕ ಮನೆಮದ್ದು ಬಳಸಲಾಗುವುದು. ನಾವಿಲ್ಲಿ ಕೆಲವೊಂದು ಬಗೆಯ ಮನೆಮದ್ದುಗಳನ್ನು ಹೇಳಿದ್ದೇವೆ, ಅವುಗಳು ಕೂಡ ಸೆಕೆಯಲ್ಲಿ ನಿಮ್ಮ ತ್ವಚೆ ರಕ್ಷಣೆಗೆ ಸಹಕಾರಿ.
ತಣ್ಣೀರ ಸ್ನಾನ
ಬೇಸಿಗೆಯಲ್ಲಿ ಮೈಯನ್ನು ತಂಪಾಗಿ ಇಡಿ, ಬೇಸಿಗೆಯಲ್ಲಿ ಮೈ ತಂಪಾಗಿ ಇಡಲು ತಣ್ಣೀರಿನ ಸ್ನಾನ ಒಳ್ಳೆಯದು.
ಸ್ನಾನ ಮಾಡಿದ ಬಳಿಕ ಮೈಯನ್ನು ಚೆನ್ನಾಗಿ ಒರೆಸಿ, ಮೈ ಒದ್ದೆ-ಒದ್ದೆ ಇದ್ದರೆ ಮತ್ತಷ್ಟು ಕಿರಿಕಿರಿಯಾಗುವುದು. ಮೈ ಒರೆಸಿದ ಬಳಿಕ ಡರ್ಮಿ ಕೂಲ್‌ನಂಥ ಪೌಡರ್ ಹಾಕಿ.
ತುಂಬಾ ಬೆವರುವ ಬಟ್ಟೆಗಳನ್ನು ಧರಿಸಬೇಡಿ ಕೆಲವೊಂದು ಬಟ್ಟೆಗಳನ್ನು ಬೇಸಿಗೆಯಲ್ಲಿ ಧರಿಸಲೇಬಾರದು, ಏಕೆಂದರೆ ಅವುಗಳನ್ನು ಧರಿಸಿದಾಗ ತುಂಬಾ ಕಿರಿಕಿರಿ ಅನಿಸುವುದು. ಸಡಿಲವಾದ ಕಾಟನ್ ಬಟ್ಟೆಗಳನ್ನು ಧರಿಸಿ. ಇನ್ನು ವರ್ಕೌಟ್‌ಗೂ ಅಷ್ಟೇ ಬೇಸಿಗೆಗೆ ಸೂಕ್ತ ಬಟ್ಟೆಗಳನ್ನು ಧರಿಸಿ.
ಐಸ್ ಪ್ಯಾಕ್ ಅಥವಾ ತಣ್ಣನೆಯ ಬಟ್ಟೆ ಇನ್ನು ತುರಿಕೆ ಇರುವ ಕಡೆ ಐಸ್ ಪ್ಯಾಕ್ ಇಡುವುದು ಅಥವಾ ಬಟ್ಟೆ ಒದ್ದೆ ಮಾಡಿ ಇಡುವುದರಿಂದ ರಿಲೀಫ್ ಸಿಗುತ್ತೆ.
ಓಟ್ ಮೀಲ್ 2 ಕಪ್ ಓಟ್ಮೀಲ್ ಅನ್ನು ಸ್ನಾನ ನೀರಿಗೆ ಹಾಕಿ 20 ನಿಮಿಷ ಬಿಡಿ, ನೀರು ಸ್ವಲ್ಪ ಬಿಸಿ ಇರುವಾಗ ಅದರಿಂದ ಸ್ನಾನ ಮಾಡಿ. ನೆನಪಿರಲಿ ಬಿಸಿ ನೀರು ಹಾಕಬೇಡಿ. ಇಲ್ಲದಿದ್ದರೆ ಓಟ್‌ಮೀಲ್ ಪೇಸ್ಟ್ ಮಾಡಿ ಅದನ್ನು ಮೈಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಸ್ವಲ್ಪ ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಬಹುದು.
ಚಂದನ ಶ್ರೀಗಂ ಕೂಡ ಬೆವರು ಕಜ್ಜಿ ಹೋಗಲಾಡಿಸಲು ಸಹಕಾರಿ. ಆದರೆ ಚಂದನ ಎಲ್ಲಾ ತ್ವಚೆಯವರಿಗೆ ಆಗಿ ಬರಲ್ಲ, ಆದ್ದರಿಂದ ಮೊದಲು ಸ್ವಲ್ಪ ಹಚ್ಚಿ ಒಂದು ಗಂಟೆ ಇಡಿ, ಏನೂ ತೊಂದರೆ ಆಗದಿದ್ದರೆ ಹಚ್ಚಬಹುದು.
ಬೇಕಿಂಗ್ ಸೋಡಾ 3-4 ಚಮಚ ಬೇಕಿಂಗ್ ಸೋಡಾವನ್ನು ಒಂದು ಬಕೆಟ್ ನೀರಿನಲ್ಲಿ ಹಾಕಿ 20 ನಿಮಿಷ ಬಿಟ್ಟು ಆ ನೀರಿನಲ್ಲಿ ಸ್ನಾನ ಮಾಡಿ.
ಲೋಳೆಸರ :
ಲೋಳೆಸರ ಕೂಡ ಬೆವರು ಕಜ್ಜಿ ಕಡಿಮೆ ಮಾಡಲು ಸಹಕಾರಿ. ಇದನ್ನು ಮೈಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಣ್ಣೀರು ಅಥವಾ ಸ್ವಲ್ಪ ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಿ.
ಸುವಾಸನೆ ಅಧಿಕವಿಲ್ಲ ಪೌಡರ್ :
ಸೋಪು ಹಾಗೂ ಪೌಡರ್ ಗಾಢವಾ ಸುವಾಸನೆ ಬೀರುವಂಥದ್ದು ಬಳಸಬೇಡಿ, ಇದರಿಂದ ತುರಿಕೆ ಹೆಚ್ಚುವುದು. ಬೇಸಿಗೆಯಲ್ಲಿ ಬಳಸಲು ಕೆಲವೊಂದು ಕಂಪನಿಯ ಪೌಡರ್ ಸಿಗುತ್ತೆ, ಅದನ್ನು ಬಳಸಿ.
ಎಪ್ಸೋಮ್ ಉಪ್ಪು ಸ್ನಾನದ ನೀರಿಗೆ ಒಂದು ಹಿಡಿ ಎಪ್ಸೋಮ್ ಉಪ್ಪುಹಾಕಿ 20 ನಿಮಿಷ ಬಿಟ್ಟು ಸ್ನಾನ ಮಾಡಿ, ಇದರಿಂದ ತುರಿಕರ ಕಡಿಮೆಯಾಗುವುದು. ಬೆವರು ಕಜ್ಜಿ ಹೋಗಲು ಎಷ್ಟು ಸಮಯ ಬೇಕು? ಬೆವರು ಕಜ್ಜಿಗೆ ಮದ್ದು ಮಾಡಿದರೆ 3-4 ದಿನದೊಳಗೆ ಕಡಿಮೆಯಾಗುತ್ತೆ, ಆದ್ದರಿಂದ ಮೈ ಬೆವರುವುದರಿಂದ ಮತ್ತೆ ಬರಬಹುದು. ಆದ್ದರಿಂದ ಬೇಸಿಗೆಯಲ್ಲಿ ಮೈಯನ್ನು ತಂಪಾಗಿ ಇಡಿ, ತಣ್ಣೀರು ಸ್ನಾನ, ತುಂಬಾ ಬಿಸಿಲಿನಲ್ಲಿ ಓಡಾಡದಿರುವುದು ಇವೆಲ್ಲಾ ಬೆವರು ಕಜ್ಜಿ ತಡೆಗಟ್ಟಲು ಸಹಕಾರಿ. ಯಾವಾಗ ವೈದ್ಯರಿಗೆ ತೋರಿಸಬೇಕು? * ಅದಲ್ಲಿ ಕೀವು ತುಂಬಿದರೆ * ಊತ ಕಂಡು ಬಂದರೆ * ನೋವು ಅಧಿಕವಿದ್ದರೆ * ಜ್ವರ * ಗಂಟಲು ನೋವು * ಮೈಕೈ ನೋವು ಮತ್ತಿತರ ಫ್ಲೂ ಲಕ್ಷಣಗಳಿದ್ದರೆ ವೈದ್ಯರನ್ನು ಭೇಟಿ ಮಾಡಿ.