ತಿರುವನಂತಪುರ: ಕೇರಳದಲ್ಲಿ ಸಾಮಾಜಿಕ ಅರಾಜಕತೆ ಮತ್ತು ಅಭದ್ರತೆ ತಾಂಡವವಾಡುತ್ತಿದೆ ಎಂದು ಭಾರತೀಯ ಚಿಂತಕರ ಚಾವಡಿ ಹೇಳಿದೆ. ಕೇರಳ ಗೂಂಡಾಗಳು ಮತ್ತು ಕ್ರಿಮಿನಲ್‌ಗಳ ಸ್ವರ್ಗವಾಗಿದೆ ಎಂದದು ವಿಮರ್ಶಿಸಿದೆ.
ಇಂತಹ ಕುಕೃತ್ಯಗಳ ವಿರುದ್ಧ ಸಾಮಾಜಿಕ ಬದ್ಧತೆಯ ಸಮಾಜ ಹೊರಹೊಮ್ಮಬೇಕು ಮತ್ತು ಜಾಗೃತಿ ಮತ್ತು ಸಾಮಾಜಿಕ ಮಧ್ಯಸ್ಥಿಕೆ ನಡೆಸಬೇಕು ಎಂದು ಭಾರತೀಯ ಚಿಂತಕರ ಚಾವಡಿ ಹೇಳಿದೆ.
ರಾಜ್ಯದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಕೊಲೆ, ಸಾಮೂಹಿಕ ಅತ್ಯಾಚಾರ, ಮಕ್ಕಳ ಮೇಲಿನ ದೌರ್ಜನ್ಯ,ಮಾದಕ ವಸ್ತುಗಳ ವಹಿವಾಟುಗಳು ಹೆಚ್ಚುತ್ತಿವೆ. ಈ ಗುಂಪುಗಳು ವ್ಯಕ್ತಿಯೊಬ್ಬನನ್ನು ಕೊಂದು, ಆತನ ಕಾಲು ಕತ್ತರಿಸಿ ದ್ವಿಚಕ್ರ ವಾಹನದಲ್ಲಿ ನಗರದಲ್ಲಿ ಸಂಚರಿಸಿರುವುದು ಅಪರಾಧಿಗಳ ಅಪಾಯಕಾರಿ ಮನಸ್ಥಿತಿಗೆ ಸಾಕ್ಷಿಯಾಗಿದೆ.
ಮದ್ಯ ಮತ್ತು ಮಾದಕ ವಸ್ತುಗಳ ಸೇವನೆ ಅನಿಯಂತ್ರಿತವಾಗಿ ಹೆಚ್ಚಿದೆ. ಮದ್ಯವನ್ನು ಸರ್ಕಾರವು ಉತ್ತೇಜಿಸುತ್ತಿದೆ ಮತ್ತು ಅಮಲು ಪದಾರ್ಥಗಳ ಮಾರಾಟವನ್ನು ಕೆಲವು ಗುಂಪುಗಳು ನಿಯಂತ್ರಿಸುತ್ತವೆ. ಹೆಣ್ಣು ಮಕ್ಕಳಿಗೆ ಮಾದಕ ವಸ್ತು ನೀಡಿ ಜಿಹಾದ್ ಸೇರಿದಂತೆ ಚಿತ್ರಹಿಂಸೆ ಹಾಗೂ ಮತಾಂತರಕ್ಕೆ ಬಳಸಿಕೊಳ್ಳಲಾಗುತ್ತದೆ. ಸಾಮೂಹಿಕ ಆತ್ಮಹತ್ಯೆ, ಕೊಲೆ ಪ್ರಕರಣಗಳು ಹೆಚ್ಚುತ್ತಿವೆ.