ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಎಯುಪಿ ಶಾಲೆ , ಮೀಂಜ ಗಾಮ ಪಂಚಾಯತಿ ಮತ್ತು ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕ್ ಮಜಿಬೈಲ್ ಇವರ ಜಂಟಿ ಸಹಯೋಗದಲ್ಲಿ ರಸ್ತೆ ಸುರಕ್ಷೆ ಮತ್ತು ಶಾಲಾ ವಿದ್ಯಾರ್ಥಿಗಳ ಸುಗಮ ರಸ್ತೆ ದಾಟುವಿಕೆಗೆ ಅನುಕೂಲವಾಗುವಂತೆ ಶಾಲಾ ಮುಂಭಾಗದಲ್ಲಿ ಬಾರಿಕೇಡ್ ಸ್ಥಾಪಿಸಲಾಯಿತು.
ರಸ್ತೆ ಬಾರಿಕೇಡ್ ಮೀಂಜ ಗ್ರಾಮ ಪಂಚಾಯತ್ ಅನುಮತಿಯೊಂದಿಗೆ ಮಜಿಬೈಲ್ ಸೇವಾ ಸಹಕಾರಿ ಸಂಘದ ಉದಾರ ಕೊಡುಗೆಯೊಂದಿಗೆ ಸ್ಥಾಪಿಸಲ್ಪಟ್ಟಿತು. ತತ್ಸಂಬಂಧವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮೀಂಜ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸಂಜೀವ ಶೆಟ್ಟಿಯವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಯರಾಮ ಬಲ್ಲಂಗುಡೆಲ್, ರುಕಿಯ ಸಿದ್ದಿಕ್, ಬಾಬು, ಸರಸ್ವತಿ, ನಂದಗೋಪಾಲ್, ಮಿಸಿರಿಯ, ಎಂ. ಕುಂಞÂ, ಜನಾರ್ಧನ ಪೂಜಾರಿ, ರೇಖಾ ಕೆ, ಮಮ್ಮುಞÂ ಹಾಜಿ, ರಮೇಶ್, ಮುಸ್ತಾಫ, ರಾಜೇಶ್ವರಿ ಎಸ್ ರಾವ್, ಜಯಪ್ರಕಾಶ್ ನಾರಾಯಣ ಮುಂತಾದವರು ಉಪಸ್ಥಿತರಿದ್ದರು. ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ ರಾವ್ ಆರ್ ಎಂ ಸ್ವಾಗತಿಸಿ ಶಾಲಾ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ವಂದಿಸಿದರು. ಬಾಲಕೃಷ್ಣ ಮಾಸ್ತರ್ ಕಾಯಕ್ರಮ ನಿರ್ವಹಿಸಿದರು.