ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತು ವತಿಯಿಂದ ವಿಶ್ವ ಜಲದಿನ ಆಚರಣೆಯ ಜನ ಜಾಗೃತಿ ಕಾರ್ಯಕ್ರಮ ಪಂಚಾಯಿತು ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಪಂ.ಉಪಾಧ್ಯಕ್ಷೆ ಡಾ.ಜಹಾನಾಜ್ ಹಂಸಾರ್ ಉದ್ಘಾಟಿಸಿದರು. ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ, ಸಿಡಿಎಸ್ ಅಧ್ಯಕ್ಷ ಜಲಜಾಕ್ಷಿ ಪಂಚಾಯತ್ ಕಾರ್ಯದರ್ಶಿ ಅನ್ವರ್ ರೆಹಮಾನ್ ಉಪಸ್ಥಿತರಿದ್ದರು. ಪಂ.ಸದಸ್ಯರು,ಕುಟುಂಬಶ್ರೀ ಸದಸ್ಯೆಯರು, ಹರಿತ ಕರ್ಮ ಸೇನಾ ಕಾರ್ಯಕರ್ತೆಯರು ,ಪೆರ್ಲ ಎಸ್.ಎನ್.ಎಸ್.ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.