ಇಂದೋರ್: ಹೋಳಿ ಹಬ್ಬದ ಆಚರಣೆ ವೇಳೆ ಕಂಠಪೂರ್ತಿ ಕುಡಿದು ಕೈಯ್ಯಲ್ಲಿದ್ದ ಚಾಕುವಿನಿಂದ ತನಗೆ ತಾನೇ ಇರಿದುಕೊಂಡ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಇಂದೋರ್ ನಲ್ಲಿ ನಡೆದಿದೆ.
ಹೋಳಿ ಹಬ್ಬದ ಆಚರಣೆ ವೇಳೆ ಕಂಠಪೂರ್ತಿ ಕುಡಿದು ಕೈಯ್ಯಲ್ಲಿ ಚಾಕು ಹಿಡಿದುಕೊಂಡು ಹೋಳಿ ನೃತ್ಯ ಮಾಡ್ತಿದ್ದ ಯುವಕ ತನಗೆ ತಾನೇ ಚಾಕು ಇರಿದುಕೊಂಡು ಬಿಟ್ಟಿದ್ದಾನೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಿಲ್ಲ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಬಂಗಂಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ 38 ವರ್ಷದ ಗೋಪಾಲ್ ತನ್ನ ತಂದೆ ಮತ್ತು ಕುಟುಂಬಸ್ಥರೊಂದಿಗೆ ಎಂಜಾಯ್ ಮಾಡುತ್ತಿದ್ದ. ಹೋಳಿ ದಹನ ಕಾರ್ಯಕ್ರಮದಲ್ಲಿ ಈತ ಪಾಲ್ಗೊಂಡಿದ್ದ. ಕುಣಿಯುತ್ತ ಕುಣಿಯುತ್ತ ಅರಿವಿಲ್ಲದೇ ತನ್ನ ಎದೆಗೆ ತಾನೇ ಚಾಕು ಇರಿದುಕೊಂಡಂತೆ ಸ್ಟಂಟ್ ಮಾಡಲು ಹೋಗಿದ್ದಾನೆ. ಮದ್ಯದ ನಶೆಯಲ್ಲಿದ್ದಿದ್ದರಿಂದ ಕಂಟ್ರೋಲ್ ಸಿಗದೆ ಚಾಕು ಅವನ ಎದೆಗೆ ಹೊಕ್ಕಿದೆ.
ಜೇಬಿನಲ್ಲಿದ್ದ ಚಾಕು ತೆಗೆದು ಮೂರ್ನಾಲ್ಕು ಬಾರಿ ಇರಿದುಕೊಂಡಂತೆ ಆಕ್ಷನ್ ಮಾಡಿದ್ದಾನೆ. ಚಾಕು ಆಳವಾಗಿ ಎದೆಗೆ ಚುಚ್ಚಿಕೊಂಡು ರಕ್ತ ಸುರಿಯಲಾರಂಭಿಸಿದೆ. ಕೂಡಲೇ ಅವನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.