ಕೋಝಿಕ್ಕೋಡ್: ವಿಶ್ವದ ಅತಿ ಚಿಕ್ಕ ತಾಯಿ ಹಸು ಎಂಬ ಹೆಗ್ಗಳಿಕೆಗೆ ಮೀನಾಕ್ಷಿ ಪಾತ್ರಳಾಗಿದ್ದು, ಗಿನ್ನಿಸ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್‍ಗೆ ಸೇರಲು ಸಜ್ಜಾಗಿದ್ದಾಳೆ!. ಕ್ಷೀರ ಕೃಷಿಕನೂ, ಫರೂಕ್ ಕರುವಂತಿರುತಿಯ ಮೊಹಮ್ಮದ್ ಬಶೀರ್ ಅವರ ಮಾಲಕತ್ವದ ಮೀನಾಕ್ಷಿ ಕುಳ್ಳ ಹಸು ಗಿನ್ನೆಸ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್‍ಗೆ ಸೇರಲು ಸಜ್ಜಾಗಿರುವ ಹಸುವಾಗಿದೆ.
ಮೂರು ವರ್ಷದ ಮೀನಾಕ್ಷಿ ಕೇವಲ 76 ಸೆಂ.ಮೀ ಎತ್ತರವಿದ್ದಾಳೆ. ಫೆಬ್ರವರಿ 12 ರಂದು ಆಕೆ ಪುಟ್ಟ ಕರುವಿಗೆ ಜನ್ಮ ನೀಡಿದಳು.ಈ ವಿಭಾಗದಲ್ಲಿ 90 ಸೆಂ.ಮೀ ಉದ್ದದ ಹಸುವಿನ ದಾಖಲೆಯನ್ನು ಮೀನಾಕ್ಷಿ ಮುರಿದಿದ್ದು, ಮೀನಾಕ್ಷಿ ಆಂಧ್ರಪ್ರದೇಶದ ಪುಂಕನೂರು ತಳಿಯ ಹಸು. ದಿನಕ್ಕೆ ಅರ್ಧ ಲೀಟರ್ ಹಾಲು ಮಾತ್ರ ನೀಡುತ್ತಾಳೆ ಮೊಹಮ್ಮದ್ ಬಶೀರ್ ರವರ ನೆಚ್ಚಿನ ಮೀನಾಕ್ಷಿ.
ಖರೀದಿ ವೇಳೆ ಮೀನಾಕ್ಷಿ ಗರ್ಭಿಣಿಯಾಗಿದ್ದಳು ಎಂದು ಬಶೀರ್ ಹೇಳುತ್ತಾರೆ. ಗಿನ್ನೆಸ್ ಬುಕ್ ಆಫ್ ವಲ್ರ್ಡ್ ರೆಕಾಡ್ರ್ಸ್ ಮೂರು ತಿಂಗಳೊಳಗೆ ಲಭ್ಯವಾಗುವ ನಿರೀಕ್ಷೆಯಿದೆ. ಮೀನಾಕ್ಷಿ ಯುನಿವರ್ಸಲ್ ರೆಕಾರ್ಡ್ ಕೂಡ ಹೊಂದಿದ್ದಾಳೆ.