HEALTH TIPS

ಹಿಂದೂ ದೇವತೆಗಳ ಅವಹೇಳನ ಮಾಡಿದ ಖಾತೆಗಳ ವಿರುದ್ಧ ಕ್ರಮ ಏಕಿಲ್ಲ: ಟ್ವಿಟರ್‌ ಸಂಸ್ಥೆಗೆ ಹೈಕೋರ್ಟ್‌ ಪ್ರಶ್ನೆ

             ಹಿಂದೂ ದೇವರು ಮತ್ತು ದೇವತೆಗಳ ಮೇಲೆ ನಿಂದನಾತ್ಮಕ ಮತ್ತು ಆಕ್ಷೇಪಾರ್ಹ ಪೋಸ್ಟ್ ಮಾಡುವ ಖಾತೆಗಳ ವಿರುದ್ಧ ಕ್ರಮಕೈಗೊಳ್ಳದ ಕುರಿತು ದಿಲ್ಲಿ ಹೈಕೋರ್ಟ್ ಸೋಮವಾರ ಟ್ವಿಟರ್ ಅನ್ನು ಪ್ರಶ್ನಿಸಿದೆ ಎಂದು Bar and Bench ವರದಿ ಮಾಡಿದೆ.

          'ಏಥಿಸ್ಟ್‌ ರಿಪಬ್ಲಿಕ್' ಎಂಬ ಹೆಸರಿನ ಟ್ವಿಟರ್ ಹ್ಯಾಂಡಲ್‌ನ ಕೆಲವು ಪೋಸ್ಟ್‌ಗಳಿಗೆ ಆಕ್ಷೇಪ ವ್ಯಕ್ತಪಡಿಸಿ ವಕೀಲ ಆದಿತ್ಯ ದೇಶವಾಲ್ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ನವೀನ್ ಚಾವ್ಲಾ ಅವರನ್ನೊಳಗೊಂಡ ವಿಭಾಗೀಯ ಪೀಠವು ನಡೆಸುತ್ತಿದೆ.

            ಹಲವಾರು ದೂರುಗಳು ನೀಡಿದ ಹೊರತಾಗಿಯೂ, ಟ್ವಿಟರ್ ಬಳಕೆದಾರರಿಂದ ಪೋಸ್ಟ್ ಮಾಡಿರುವ "ಅಪರಾಧಕಾರಿ ವಿಷಯವನ್ನು" ಟ್ವಿಟರ್ ತೆಗೆದುಹಾಕಿಲ್ಲ ಎಂದು ದೇಶವಾಲ್ ನ್ಯಾಯಾಲಯಕ್ಕೆ ತಿಳಿಸಿದ್ದರು.

             "ನೀವು (ಟ್ವಿಟರ್) ಸಂವೇದನಾಶೀಲರಾಗಿದ್ದರೆ, (ಅಂತಹ ಖಾತೆಗಳನ್ನು ಅಥವಾ ಪೋಸ್ಟ್‌ಗಳನ್ನು) ನೀವು ನಿರ್ಬಂಧಿಸುತ್ತೀರಿ. ಇತರ ಜನಾಂಗಗಳು ಅಥವಾ ಇತರ ಪ್ರದೇಶಗಳ ಜನರ ಬಗ್ಗೆ ನೀವು ಸಂವೇದನಾಶೀಲರಾಗಿಲ್ಲ ಎಂದು ಇದು ತೋರಿಸುತ್ತದೆ" ಎಂದು ನ್ಯಾಯಮೂರ್ತಿ ಸಂಘಿ ಹೇಳಿರುವುದಾಗಿ LiveLaw.com ವರದಿ ಮಾಡಿದೆ.

            ಟ್ವಿಟರ್ ಪರವಾಗಿ ಹಾಜರಾದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, ನ್ಯಾಯಾಲಯದ ಆದೇಶದ ನಂತರವೇ ಖಾತೆಯನ್ನು ಶಾಶ್ವತವಾಗಿ ನಿರ್ಬಂಧಿಸಬಹುದು ಎಂದು ಪೀಠಕ್ಕೆ ತಿಳಿಸಿದ್ದಾರೆ.

ಟ್ವಿಟರ್ "ಯಾವುದೇ ವ್ಯಕ್ತಿಯನ್ನು ನಿರ್ಬಂಧಿಸಲು ಸಾಧ್ಯವಿಲ್ಲ" ಮತ್ತು ನ್ಯಾಯಾಲಯದ ಆದೇಶದ ಅನುಪಸ್ಥಿತಿಯಲ್ಲಿ ಆಕ್ಷೇಪಾರ್ಹ ವಿಷಯದ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

              "ಇದು (ನಿಮ್ಮ) ತರ್ಕವಾಗಿದ್ದರೆ ನೀವು ಡೊನಾಲ್ಡ್ ಟ್ರಂಪ್ ಅವರನ್ನು ಏಕೆ ನಿರ್ಬಂಧಿಸಿದ್ದೀರಿ?" ಪ್ರಾಥಮಿಕ ದೃಷ್ಟಿಯಲ್ಲಿ, ಖಾತೆಯನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂಬ ಟ್ವಿಟರ್‌ನ ನಿಲುವು "ಸಂಪೂರ್ಣವಾಗಿ ಸರಿಯಾಗಿಲ್ಲ" ಎಂದು ನ್ಯಾಯಾಲಯ ಹೇಳಿದೆ.

ಇನ್ನೊಂದು ಧರ್ಮಕ್ಕೆ ಸಂಬಂಧಿಸಿದಂತೆ ಇಂತಹ ಘಟನೆ ನಡೆದಿದ್ದರೆ, ಸಾಮಾಜಿಕ ಮಾಧ್ಯಮ ವೇದಿಕೆಯು ಹೆಚ್ಚು ಗಂಭೀರವಾಗಿ ಮತ್ತು ಸೂಕ್ಷ್ಮವಾಗಿ ಇರುತ್ತಿತ್ತು ಎಂದು ಹೇಳಿದ ನ್ಯಾಯಪೀಠವು ಈ ಹಿಂದೆ ಹಲವು ಖಾತೆಗಳನ್ನು ನಿಷ್ಕ್ರಿಯಗೊಳಿಸಿದ ತನ್ನ ನೀತಿಯ ವಿವರಣೆಯನ್ನು ಸಲ್ಲಿಸುವಂತೆ ಟ್ವಿಟರ್‌ಗೆ ಸೂಚಿಸಿದೆ.

             'ಏಥಿಸ್ಟ್‌ ರಿಪಬ್ಲಿಕ್' ಪರವಾಗಿ ವಕೀಲೆ ವೃಂದಾ ಭಂಡಾರಿ ಹಾಜರಾಗಿದ್ದಾರೆ.

ಪ್ರಕರಣದ ತೀರ್ಪು ಬರುವವರೆಗೆ ಯಾವುದೇ ಆಕ್ಷೇಪಾರ್ಹ ವಿಷಯವನ್ನು ಅಪ್‌ಲೋಡ್ ಮಾಡದಿದ್ದಲ್ಲಿ ಮಾತ್ರ ʼಏಥಿಸ್ಟ್‌ ರಿಪಬ್ಲಿಕ್‌ʼ ಅನ್ನು ಪ್ರಕರಣದಲ್ಲಿ ಪ್ರತಿವಾದಿಯಾಗಿ ಪರಿಗಣಿಸುವುದಾಗಿ ಪೀಠ ಹೇಳಿದೆ.

               ನ್ಯಾಯಾಲಯವು ಸೆಪ್ಟೆಂಬರ್ 6 ರಂದು ಅರ್ಜಿಯ ಮುಂದಿನ ವಿಚಾರಣೆ ನಡೆಸಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries