ಕುಂಬಳೆ: ಕೇರಳ ರಾಜ್ಯ ಟೈಲರ್ಸ್ ಅಸೋಸಿಯೇಶನ್ ಮಂಜೇಶ್ವರ ತಾಲೂಕು ಸಮ್ಮೇಳನವು ಮಾ.11|(ಇಂದು) ಶುಕ್ರವಾರ ಬೆಳಗ್ಗೆ 10.30ಕ್ಕೆ ಕುಂಬಳೆ ವ್ಯಾಪಾರ ಭವನದಲ್ಲಿ ಜರಗಲಿರುವುದು. ಮಂಜೇಶ್ವರ ತಾಲೂಕು ಕೆಎಸ್‍ಟಿಎ ಅ|ಧ್ಯಕ್ಷ ರಾಮ ಪೊಯ್ಯಕಂಡ ಅಧ್ಯಕ್ಷತೆ ವಹಿಸಲಿದ್ದಾರೆ. ಕೆಎಸ್‍ಟಿಎ ರಾಜ್ಯ ಸಮಿತಿ ಅಧ್ಯಕ್ಷ ಶ್ರೀರಾಮನ್ ಚೆನ್ನಿಕ್ಕರ ಉದ್ಘಾಟಿಸಲಿದ್ದಾರೆ. ರಾಜ್ಯ ಸಮಿತಿ ಸದಸ್ಯ ಬಾಲಕೃಷ್ಣ ಕರಿಪ್ಪರ, ರಾಜ್ಯ ವೆಲೇರ್ ಬೋರ್ಡ್ ಸದಸ್ಯ ಮೋಹನ್‍ದಾಸ್ ಕುಂಬಳೆ, ಕಾಸರಗೋಡು ಜಿಲ್ಲಾ ಅಧ್ಯಕ್ಷ ಸುರೇಶ್ ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ ಯು ಶಂಕರನ್, ಕೆಎಸ್‍ಟಿಎ ತಾಲೂಕು ಉಪಾ|ಧ್ಯಕ್ಷ ಕೇಶವಮಯ್ಯ ಮಾತನಾಡಲಿದ್ದಾರೆ. ಮಂಜೇಶ್ವರ ತಾಲೂಕು ಕೆಎಸ್‍ಟಿಎ ಪ್ರ`ಧಾನ ಕಾರ್ಯದರ್ಶಿ ಸತೀಶ್ ಆಚಾರ್ಯ ವಾರ್ಷಿಕ ಲೆಕ್ಕಪತ್ರ ಹಾಗೂ ವಾರ್ಷಿಕ ವರದಿಯನ್ನು ಮಂಡಿಸಲಿದ್ದಾರೆ. ತಾಲೂಕು ಕಾರ್ಯದರ್ಶಿ ಸಂತೋಷ್ ಶೆಟ್ಟಿ ಸ್ವಾಗತಿಸಿ, ಉಪಾ`À್ಯಕ್ಷೆ ಲೇಖ ಎಸ್. ವಂದಿಸಲಿದ್ದಾರೆ.