ಕಾಸರಗೋಡು: 'ತಿಳಿ ನೀರು ಹರಿಯಲಿದೆ ನವ ಕೇರಳ' ಕಾರ್ಯಕ್ರಮದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮದ ಬ್ರೋಶರ್ ಹಾಗೂ ಲಾಂಛನ ಬಿಡುಗಡೆ ಸಮಾರಂಭ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಜಿಪಂ ಅಧ್ಯಕ್ಷೆ ಬೇಬಿ ಬಾಳಕೃಷ್ಣನ್ ಬ್ರೋಶರ್ ಹಾಗೂ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಲಾಂಛನ ಬಿಡುಗಡೆಗೊಳಿಸಿದರು. ಜಿಪಂ ಉಪಾಧ್ಯಕ್ಷ ಶಾನವಾಸ್ ಪಾದೂರ್, ಪಿಎಯು ಪ್ರೋಜೆಕ್ಟ್ ಡೈರೆಕ್ಟರ್ ಕೆ ಪ್ರದೀಪ್, ಹಸಿರು ಕೇರಳ ಯೋಜನೆ ಜಿಲ್ಲಾ ಕೋರ್ಡಿನೇಟರ್ ಎಂ.ಪಿ ಸುಬ್ರಹ್ಮಣ್ಯನ್, ಪಂಚಾಯಿತಿ ಉಪನಿರ್ದೇಶಕ ಎಂ.ಪಿ ಜೋಯ್ಸನ್ ಮ್ಯಾಥ್ಯೂ, ಸ್ಥಾಯೀ ಸಮಿತಿ ಅಧ್ಯಕ್ಷರು, ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಹೊಳೆಗಳನ್ನು ಶುಚೀಕರಿಸುವುದರೊಂದಿಗೆ ಹೂಳೆತ್ತುವ ಮೂಲಕ ಮಾಲಿನ್ಯರಹಿತ ಹರಿವು ಹಾಗೂ ಜಲಮೂಲಗಳನ್ನು ಶುಚಿಯಾಗಿರಿಸಿಕೊಳ್ಳುವ ಉದ್ದೇಶದಿಂದ 'ತಿಳಿ ನೀರು ಹರಿಯಲಿದೆ ನವ ಕೇರಳ'ಯೋಜನೆ ಜಾರಿಗೊಳ್ಳಲಿದೆ.