ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜೀವನದ ಕಥೆಗಳ ಸಂಗ್ರಹವಾಗಿರುವ ʼದಿ ಮೋದಿ ಸ್ಟೋರಿʼ ಎಂಬ ವೆಬ್‌ಸೈಟ್ ಅನ್ನು ಮಹಾತ್ಮಾ ಗಾಂಧಿಯವರ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿ ಅವರು ಶನಿವಾರ ಉದ್ಘಾಟಿಸಿದ್ದಾರೆ.
ʼಮೋದಿ ಸ್ಟೋರಿʼ ನರೇಂದ್ರ ಮೋದಿಯವರ ಜೀವನದ ಸ್ಪೂರ್ತಿದಾಯಕ ಕ್ಷಣಗಳನ್ನು ಒಟ್ಟುಗೂಡಿಸುವ ಸ್ವಯಂ-ಚಾಲಿತ ಉಪಕ್ರಮವಾಗಿದೆ. ಮೋದಿಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಜನರು ಮೋದಿಯವರ ಕಾರ್ಯಗಳ ಬಗ್ಗೆ ಮೆಲುಕು ಹಾಕಿದ ನೆನಪುಗಳನ್ನು ಈ ವೆಬ್'ಸೈಟ್ ಒಳಗೊಂಡಿರಲಿದೆ.
ಸಮಾರಂಭದಲ್ಲಿ ಒಲಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರೂ ಕೂಡ ಭಾಗಿಯಾಗಿದ್ದು, ವೆಬ್ ಸೈಟ್ ಕುರಿತು ಮಾತನಾಡಿದ ಅವರು, ನರೇಂದ್ರ ಮೋದಿಯವರೊಂದಿಗಿನ ಸಂವಾದದ ವೇಳೆ ಅವರ ಸರಳತೆಗೆ ಮೈಮರೆತಿದ್ದೆ, ನಾನು ದೇಶದ ಪ್ರಧಾನಿಯೊಂದಿಗೆ ಇದ್ದೇನೆ ಎಂದು ನನಗೆ ಅನಿಸಲಿಲ್ಲ ಎಂದು ಹೇಳಿದ್ದಾರೆ.
ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಟ್ವೀಟ್ ಮಾಡಿ, ಪ್ರಧಾನಿ ಮೋದಿಯವರ ಜೀವನ ಪಯಣ ಮತ್ತು ಸಾರ್ವಜನಿಕ ಜೀವನದಲ್ಲಿ ಅವರು ಮಾಡಿದ ಆಸಕ್ತಿದಾಯಕ ಕಾರ್ಯಗಳು ಮತ್ತು ಅವರ ಜೀವನದಲ್ಲಿ ನಡೆದಿರುವ ಸ್ವಾರಸ್ಯಕರ ಘಟನೆಗಳನ್ನು ತಿಳಿದುಕೊಳ್ಳಲು ಒoಜisಣoಡಿಥಿ.iಟಿ ಅನ್ನು ವೀಕ್ಷಣೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.