ಕುಂಬಳೆ: ಸಂಕಷ್ಟದ ದಿನಗಳಲ್ಲೂ ಜನತೆಗೆ ಧೈರ್ಯ ತುಂಬಿ, ಉತ್ತಮ ಜೀವನ ನಿರ್ವಹಣೆಗೆ ದಾರಿ ತೋರುವ ಮೂಲಕ ತ್ವಾಹಿರುಲ್ ಅಹ್ದಲ್ ತಂಙಳ್ ಆದರ್ಶಪ್ರಾಯರಾಗಿದ್ದರು., ಎಂದು ಸಮಸ್ತ ಕೇಂದ್ರ ಮುಶಾವರ ಸದಸ್ಯ ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಲ್ ತಿಳಿಸಿದ್ದಾರೆ.
ಅವರು ಪುತ್ತಿಗೆ ಮುಹಿಮತ್‍ನಲ್ಲಿ ಸಯ್ಯದ್ ತ್ವಾಹಿರುಲ್ ಅಹ್ದಲ್ ತಂಙಳ್ ಹದಿನಾರನೇ ಉರುಸ್ ಮುಬಾರಕ್ ಉದ್ಘಾಟಿಸಿ ಅವರು ಮಾತನಾಡಿದರು. ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ ಅಧ್ಯಕ್ಷತೆ ವಹಿಸಿದ್ದರು. ರಾತ್ರಿ ನಡೆದ ಧಾರ್ಮಿಕ ಪ್ರವಚನ ಸಮಾರಂಭಕ್ಕೆ ಸಯ್ಯದ್ ಅತಾವುಲ್ಲಾ ತಙಳ್ ಉದ್ಯಾವರ ಚಾಲನೆ ನೀಡಿದರು.
13ರಂದು ಸಂಜೆ ಪದವಿಪ್ರದಾನ ಸಮಾರಂಭ ನಡೆಯುವುದು.