ನವದೆಹಲಿ: ಭೂಮಿಯಿಂದ ಆಗಸದ ಗುರಿಗಳನ್ನು ಹೊಡೆದುರುಳಿಸಬಲ್ಲ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ ಎಂದು ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ (ಡಿಆರ್ ಡಿಒ) ಹೇಳಿದೆ.
ಒಡಿಶಾದ ಬಾಲಸೋರ್ ಕರಾವಳಿಯಲ್ಲಿ ಮಧ್ಯಮ ವ್ಯಾಪ್ತಿಯ ಭೂಮಿಯಿಂದ ಆಗಸದ ಗುರಿಗಳನ್ನು ಹೊಡೆದುರುಳಿಸಬಲ್ಲ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ನಿಗದಿತ ಗುರಿಯನ್ನು ಛಿದ್ರಮಾಡುವಲ್ಲಿ ಕ್ಷಿಪಣಿ ವ್ಯವಸ್ಥೆ ಯಶಸ್ವಿಯಾಗಿದೆ ಎಂದು ಆಖಆಔ ಅಧಿಕಾರಿಗಳು ತಿಳಿಸಿದ್ದಾರೆ.
ಈ ವ್ಯವಸ್ಥೆಯು ಭಾರತೀಯ ಸೇನೆಯ ಭಾಗವಾಗಿದ್ದು, ಪರೀಕ್ಷೆಯಲ್ಲಿ, ಕ್ಷಿಪಣಿಯು ಬಹಳ ದೂರದಲ್ಲಿದ್ದ ಗುರಿಯತ್ತ ನೇರವಾದ ಹೊಡೆತ ನೀಡಿ ಗುರಿಯನ್ನು ಕ್ಷಣ ಮಾತ್ರದಲ್ಲಿ ಹೊಡೆದುರುಳಿಸಿದೆ ಎಂದು ಆಖಆಔ ಅಧಿಕಾರಿಗಳು ತಿಳಿಸಿದ್ದಾರೆ.