ಕಾಸರಗೋಡು: ಯೂಕ್ರೇನ್‍ನಲ್ಲಿ ಸಿಲುಕಿಕೊಂಡಿರುವ ಕಾಸರಗೋಡು ಜಿಲ್ಲೆಯ ನಾಗರಿಕರ ಬಗ್ಗೆ ಮಾಹಿತಿ ಅರಿತುಕೊಳ್ಳುವ ನಿವಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತ್ಯೇಕ ಕೊಠಡಿ ಆರಂಭಿಸಲಾಗಿದೆ. ಈ ಮೂಲಕ ಅವರ ಹೆತ್ತವರಿಗೂ ಮಾಹಿತಿ ನೀಡುವ ನಿಟ್ಟಿನಲ್ಲಿ ನಿಯಂತ್ರಣ ಕೊಠಡಿ ಆರಂಭಿಸಲಾಗಿದೆ. ನಿಯಂತ್ರಣ ಕೊಠಡಿ ಸಂಖ್ಯೆ(04994-257700, 9446601700). ಇದರೊಂದಿಗೆ ಯೂಕ್ರೇನ್‍ನಲ್ಲಿರುವ ಜಿಲ್ಲೆಯ 44ಮಂದಿಯನ್ನು ಊರಿಗೆ ಕರೆತರುವ ಕ್ರಮವನ್ನೂ ಜಿಲ್ಲಾಡಳಿತ ತೀವ್ರಗೊಳಿಸಿದೆ. ಯೂಕ್ರೇನ್‍ನಲ್ಲಿ ಸಿಲುಕಿಕೊಂಡಿರುವವರ ಹೆತ್ತವರು ಯಾ ಸಂಬಂಧಿಕರು ಈ ಸಂಖ್ಯೆ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.