ಕಾಸರಗೋಡು: ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧವಿಲ್ಲದೆ ಮತೀಯಶಿಕ್ಷಣಕ್ಕಾಗಿ ಯೆಮೆನ್‍ಗೆ ತೆರಳಿದ್ದು, ಅಲ್ಲಿನ ಪೊಲೀಸರ ಮಧ್ಯಪ್ರವೇಶದಿಂದ ವಾಪಸಾಗಿರುವ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್.ಪಿ ನಗರದಿಂದ ಅಬ್ದುಲ್ ಹಾಶೀಂ ಸೇರಿದಂತೆ 14ಮಂದಿಯ ತಂಡದ ವಿರುದ್ಧ ಇಂಟೆಲಿಜೆನ್ಸ್ ಏಜನ್ಸಿಗಳು ತನಿಖೆ ಆರಂಭಿಸಿದೆ.
ಅಬ್ದುಲ್ ಹಾಶೀ ಮತ್ತು ತಂಡ ಒಂದು ತಿಂಗಳ ಹಿಂದೆ ಯೆಮೆನ್‍ಗೆ ತೆರಳಿದ್ದು, ಅಲ್ಲಿಂದ ಸುಲ್ತಾನೇಟ್ ಆಫ್ ಒಮಾನ್‍ನ ಸಲಾಲ ತಲುಪಿ, ಅಲ್ಲಿಂದ 200ಕಿ,ಮೀ ದೂರದ ಯೆಮೆನ್ ರಾಜಧಾನಿ ಸನತ್ತ್‍ಯೀಗೆ ತಲುಪುವುದು ಉದ್ದೇಶವಾಗಿದ್ದರೂ, ತಂಡವನ್ನು ಯೆಮೆನ್ ಚೆಕ್‍ಪೋಸ್ಟ್ ಅಧಿಕಾರಿಗಳು ತಡೆದು, ವಾಪಾಸು ಕಳುಹಿಸಿದ್ದರು. ವಾಪಸಾಗಿರುವ 14ಮಂದಿ ಸಲಫಿ 'ದಾಯಿಸ್'ವಿಭಾಗಕ್ಕೊಳಪಟ್ಟವರಾಗಿದ್ದಾರೆ.
ಕಾಸರಗೋಡು ಜಿಲ್ಲೆಯ ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಪಡನ್ನ, ತೃಕ್ಕರಿಪುರ ಪ್ರದೇಶದಿಂದ ಈ ಹಿಂದೆ ಮಕ್ಕಳು, ಮಹಿಳೆಯರು ಸಏರಿದಂತೆ ಹಲವು ಮಂದಿ ಜಾಗತಿಕ ಭಯೋತ್ಪಾದಕ ಸಂಘಟನೆಗೆ ಸೇರ್ಪಡೆಗೊಳ್ಳಲು ಅಫ್ಘಾನಿಸ್ತಾನ ತೆರಳಿದ್ದು, ಇವರಲ್ಲಿ ಬಹುತೇಕ ಮಂದಿ ಅಮೆರಿಕದ ವೈಮಾನಿಕ ದಾಳಿಗೆ ಸಿಲುಕಿ ಹತರಾಗಿದ್ದರು. ಈ ಮಧ್ಯೆ ಅಫ್ಘಾನಿಸ್ತಾನದಲ್ಲಿ ಬಂಧಿತಳಾದ ತಿರುವನಂತಪುರ ನಿವಾಸಿ, ಕಾಸರಗೋಡಿನ ಖಾಸಗಿ ದಂತವೈದ್ಯಕೀಯ ಕಾಲೇಜೊಂದರಲ್ಲಿ ವಇದ್ಯಾರ್ಥಿನಿಯಾಗಿದ್ದ ನಿಮಿಷಾ ಅಲಿಯಾಸ್ ಫಾತಿಮಾ ಸೇರಿದಂತೆ ಹಲವರನ್ನು ಹೊಸದಾಗಿ ಅಧಿಕಾರಕ್ಕೆ ಬಂದ ತಾಲಿಬಾನ್ ಸರ್ಕಾರ ಬಿಡುಗಡೆಗೊಳಿಸಿತ್ತು. ಮತೀಯ ಶಿಕ್ಷಣದ ಹೆಸರಲ್ಲಿ ಐಸಿಸ್ ವಿಚಾರಧಾರೆಯ ಉಗ್ರಗಾಮಿ ಸಂಘಟನೆಗೆ ನೇಮಕಾತಿ ನಡೆಸುವ ದೊಡ್ಡ ಜಾಲ ಕೇಳಳಾದ್ಯಂತ ನಡೆಯುತ್ತಿದ್ದು, ಈ ಬಗ್ಗೆ ಇಂಟೆಲಿಜೆನ್ಸ್ ವಿಭಾಗ ತನಿಖೆ ಆರಂಭಿಸಿದೆ.