ಮಕ್ಕಳು ಪ್ರತಿದಿನ ವಿಭಿನ್ನವಾದುದನ್ನೇ ಕೇಳುತ್ತಾರೆ. ಅದರಲ್ಲೂ ಆಹಾರದ ವಿಚಾರದಲ್ಲಿ ವೈಶಿಷ್ಟ್ಯತೆ ಇಲ್ಲದೇ ಹೋದಲ್ಲಿ, ಅದು ಅವರ ಹೊಟ್ಟೆ ಸೇರುವುದು ಬಹಳ ಕಷ್ಟ. ಆದರೆ, ಬೆಳಗ್ಗಿನ ತಿಂಡಿಗೆ ವೈರೈಟಿ ಜೊತೆಗೆ ಆರೋಗ್ಯಕರವಾಗಿರುವುದನ್ನು ನೀಡುವುದು ಪೋಷಕರಿಗೆ ಸವಾಲೇ ಸರಿ. ಅದಕ್ಕಾಗಿ ನಾವಿಂದು ಮಕ್ಕಳಿಗೆ ಇಷ್ಟವಾಗುವ ಜೊತಗೆ ಅವರನ್ನು ದಿನವಿಡೀ ಉಲ್ಲಾಸದಾಯಕವಾಗಿ ಇಡುವ ವಿಶೇಷ ಪಾನೀಯವೊಂದನ್ನು ತಿಳಿಸಿಕೊಡಲಿದ್ದೇವೆ.
ಅದೇ ಸ್ಟ್ರಾಬೆರಿ ಮಿಲ್ಕ್ ಶೇಕ್. ಯಾವುದೇ ಕಿಡ್ಸ್ ಪಾರ್ಟಿ, ಹುಟ್ಟುಹಬ್ಬದ ಸಂತೋಷಕೂಟ ಅಥವಾ ಯಾವುದೇ ರೀತಿಯ ವಿಶೇಷ ಸಂದರ್ಭಕ್ಕಾಗಿ ಇದು ಉತ್ತಮ ಆಯ್ಕೆಯಾಗಿದೆ. ಯಾವುದೇ ವಿಶೇಷ ಸಂದರ್ಭವಿಲ್ಲದಿದ್ದರೂ ಇದನ್ನು ಕುಡಿಯಬಹುದು. ಈ ಪಾನೀಯವನ್ನು ಸೇವಿಸುವುದರಿಂದ ನಿಮಗೆ ಸಾಕಷ್ಟು ಶಕ್ತಿ ಸಿಗುವುದು, ಜೊತೆಗೆ ಬೇಸಿಗೆಯಲ್ಲಿ ಉಲ್ಲಾಸವನ್ನು ಅನುಭವಿಸಲು ಸಹಾಯ ಮಾಡುತ್ತದೆ.
ದಿನವಿಡೀ ಉಲ್ಲಾಸದಾಯಕವಾಗಿರಲು ಸ್ಟ್ರಾಬೆರಿ ಮಿಲ್ಕ್ ಶೇಕ್ ಹೇಗೆ ತಯಾರಿಸುವುದು ಎಂಬುದನ್ನು ಇಲ್ಲಿ ನೀಡಲಾಗಿದೆ: ಮಕ್ಕಳು ದಿನವಿಡೀ ಉಲ್ಲಾಸದಾಯಕವಾಗಿರಲು ನೀಡಿ ಈ ಸ್ಟ್ರಾಬೆರಿ ಮಿಲ್ಕ್ ಶೇಕ್
ಬೇಕಾಗುವ ಪದಾರ್ಥಗಳು: 1 ಕಪ್ ಸ್ಟ್ರಾಬೆರಿ 1 ಕಪ್ ತಣ್ಣನೆಯ ಹಾಲು 5 ಚಮಚ ಸಕ್ಕರೆ
ತಯಾರಿಸುವ ವಿಧಾನ: ಮೊದಲು ಮಿಕ್ಸರ್ ಗ್ರೈಂಡರ್‌ನ ಜಾರ್ ತೆಗೆದುಕೊಂಡು ತಾಜಾ ಸ್ಟ್ರಾಬೆರಿಗಳನ್ನು ಜಾರ್‌ಗೆ ಹಾಕಿ. ಇದಕ್ಕೆ ಚಮಚ ಸಕ್ಕರೆಯನ್ನು ಹಾಕಿ, ಚೆನ್ನಾಗಿ ರುಬ್ಬಿಕೊಳ್ಳಿ. ನಂತರ, ಸ್ಟ್ರಾಬೆರಿಯಿಂದ ತಯಾರಾದ ಮಿಶ್ರಣವನ್ನು ಒಂದು ಗ್ಲಾಸಿಗೆ ಹಾಕಿ, ಈಗ ಮೇಲಿನಿಂದ ತಣ್ಣನೆಯ ಹಾಲನ್ನು ಸುರಿಯಿರಿ. ಚಮಚದ ಸಹಾಯದಿಂದ ಈ ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಇಲ್ಲಿ ನೀವು ಹಾಲು ಸೇರಿಸಿದ ತಕ್ಷಣ ಸ್ಟ್ರಾಬೆರಿ ಮತ್ತು ಹಾಲನ್ನು ಚೆನ್ನಾಗಿ ಮಿಶ್ರಣ ಮಾಡುವುದು ಬಹಳ ಮುಖ್ಯ. ಈಗ ಸ್ಟ್ರಾಬೆರಿ ಮಿಲ್ಕ್ ಶೇಕ್ ಸಿದ್ಧವಾಗಿದ್ದು, ಇದನ್ನು ಸ್ಟ್ರಾಬೆರಿ ತುಂಡುಗಳಿಂದ ಅಲಂಕರಿಸಿ. ಬೇಕಿದ್ದಲ್ಲಿ ಇದಕ್ಕೆ ಒಂದು ಚಮಚ ವೆನಿಲ್ಲಾ ಐಸ್ ಕ್ರೀಮ್ ಮತ್ತು ಸ್ಟ್ರಾಬೆರಿ ಐಸ್ ಕ್ರೀಂ ಅನ್ನು ಕೂಡ ಸೇರಿಸಬಹುದು. ನಿಮ್ಮ ಆಯ್ಕೆಯ ಐಸ್ ಕ್ರೀಂ ಫ್ಲೇವರ್ ಸೇರಿಸಿದ ನಂತರ, ಈ ಪಾನೀಯವನ್ನು ಚೆನ್ನಾಗಿ ಅಲ್ಲಾಡಿಸಬೇಕು.
ಕ್ಯಾಲೋರಿ - 282kcl ಪ್ರೋಟೀನ್ - 6.1g ಕಾರ್ಬೋಹೈಡ್ರೇಟ್ - 25.6g ಫೈಬರ್ - 1.3g