ಕೊಚ್ಚಿ: ಗೂಂಡಾಗಳು ಆಯೋಜಿಸಿದ್ದ ಮದ್ಯದ ಪಾರ್ಟಿಯಲ್ಲಿ ಸಮವಸ್ತ್ರ ಧರಿಸಿ ಭಾಗವಹಿಸಿದ್ದ ಓರ್ವ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿರುವ ಘಟನೆ ಕೇರಳದ ತಿರುವನಂತಪುರದಲ್ಲಿ ಶನಿವಾರ ನಡೆದಿದೆ.
ಕೊಚ್ಚಿ: ಗೂಂಡಾಗಳು ಆಯೋಜಿಸಿದ್ದ ಮದ್ಯದ ಪಾರ್ಟಿಯಲ್ಲಿ ಸಮವಸ್ತ್ರ ಧರಿಸಿ ಭಾಗವಹಿಸಿದ್ದ ಓರ್ವ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿರುವ ಘಟನೆ ಕೇರಳದ ತಿರುವನಂತಪುರದಲ್ಲಿ ಶನಿವಾರ ನಡೆದಿದೆ.
ಸಿವಿಲ್ ಪೊಲೀಸ್ ಅಧಿಕಾರಿ ಜಿಹಾನ್ ಅಮಾನತುಗೊಂಡವರು.
ಓರ್ವ ಗ್ಯಾಂಗ್ ಲೀಡರ್ ಹಾಗೂ ಅನೇಕ ಪ್ರಕರಣಗಳಲ್ಲಿ ಬೇಕಾಗಿದ್ದ ಮೆಂಟಲ್ ದೀಪು ಎಂಬಾತನನ್ನು ಕೊಲೆ ಮಾಡಿದ್ದ ರೌಡಿ ಆಯಿರುಪ್ಪರ ಕುಟ್ಟನ್ ಎಂಬಾತ ಆಯೋಜಿಸಿದ್ದ ಮದ್ಯದ ಪಾರ್ಟಿಯಲ್ಲಿ ಜಿಹಾನ್ ಪಾಲ್ಗೊಂಡಿದ್ದರು. ದೀಪು ಕೊಲೆಗೂ ಮೂರು ದಿನಗಳ ಮುಂಚೆಯೇ ಮದ್ಯದ ಪಾರ್ಟಿ ಆಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ.
ಇದಕ್ಕೂ ಮುನ್ನ ವಲಯ ಐಜಿ ನಿಶಾಂತಿನಿ ಅವರು ಸಮವಸ್ತ್ರ ಧರಿಸಿ ಮದ್ಯದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅಧಿಕಾರಿಯ ಫೋಟೋವನ್ನು ಸ್ವೀಕರಿಸಿದರು. ಇದರ ಆಧಾರದ ಮೇಲೆ ಇಲಾಖಾ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ.
ಇಷ್ಟೇ ಅಲ್ಲದೆ, ಜಿಹಾನ್ ತನ್ನ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಇತರ ಅಕ್ರಮ ವಹಿವಾಟು ನಡೆಸಿರುವ ಸೂಚನೆಗಳೂ ಇವೆ. ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ವಿದೇಶಿ ಮದ್ಯದ ಕಳ್ಳಸಾಗಣೆಗೆ ಸಹಾಯ ಮತ್ತು ಪ್ರೋತ್ಸಾಹ ನೀಡಿದ ಆರೋಪದ ಬಗ್ಗೆಯೂ ತನಿಖೆ ನಡೆಯುತ್ತಿದೆ.