ಉಡುಪಿಯ ಕಾಲೇಜೊಂದರ ಆರು ವಿದ್ಯಾರ್ಥಿನಿಯರ ವೈಯಕ್ತಿಕ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಸೋರಿಕೆ ಮಾಡಿದ ವಿಚಾರ ಇಂದು ರಾಜ್ಯಸಭೆಯಲ್ಲಿ ಉಲ್ಲೇಖಗೊಂಡಿತಲ್ಲದೆ ಸದಸ್ಯರೊಬ್ಬರು ಡೇಟಾ ಹಕ್ಕುಗಳ ರಕ್ಷಣೆಗೂ ಆಗ್ರಹಿಸಿದರು.
ಉಡುಪಿಯ ಕಾಲೇಜೊಂದರ ಆರು ವಿದ್ಯಾರ್ಥಿನಿಯರ ವೈಯಕ್ತಿಕ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಸೋರಿಕೆ ಮಾಡಿದ ವಿಚಾರ ಇಂದು ರಾಜ್ಯಸಭೆಯಲ್ಲಿ ಉಲ್ಲೇಖಗೊಂಡಿತಲ್ಲದೆ ಸದಸ್ಯರೊಬ್ಬರು ಡೇಟಾ ಹಕ್ಕುಗಳ ರಕ್ಷಣೆಗೂ ಆಗ್ರಹಿಸಿದರು.
ಶೂನ್ಯವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ತೃಣಮೂಲ ಕಾಂಗ್ರೆಸ್ ಸಂಸದೆ ಮೌಸಮ್ ನೂರ್, ಹಿಜಾಬ್ ವಿವಾದದ ನಡುವೆ ಕನಿಷ್ಠ ಆರು ವಿದ್ಯಾರ್ಥಿನಿಯರ ವೈಯಕ್ತಿಕ ಮಾಹಿತಿಯನ್ನು ಸೋರಿಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ ಎಂದು ಹೇಳಿದರು.
"ಅವರ ಹೆಸರು, ವಿಳಾಸ ಇತ್ಯಾದಿ ವೈಯಕ್ತಿಕ ಮಾಹಿತಿಯನ್ನು ಹಲವು ಜನರು ಹಂಚಿಕೊಂಡು ಈ ಮೂಲಕ ಅವರ ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆ,'' ಎಂದು ಹೇಳಿದರು.
'ಸಲ್ಲಿ ಡೀಲ್' ಮತ್ತು 'ಬುಲ್ಲಿ ಬಾಯ್' ಆಯಪ್ ವಿಚಾರಗಳನ್ನೂ ಈ ಸಂದರ್ಭ ಪ್ರಸ್ತಾಪಿಸಿದ ಅವರು ವೈಯಕ್ತಿಕ ಮಾಹಿತಿಯನ್ನು ಸೋರಿಕೆ ಮಾಡಿ ಮಹಿಳೆಯರ ಗೌಪ್ಯತೆಯ ಹಕ್ಕುಗಳು ಮತ್ತು ಸುರಕ್ಷತೆಯನ್ನು ಉಲ್ಲಂಘಿಸುವುದು ಸಾಮಾನ್ಯವಾಗಿದೆ. ಇದು ಮೂಲಭೂತ ಹಕ್ಕುಗಳ ಉಲ್ಲಂಘನೆಯೂ ಆಗುತ್ತದೆ, ಈ ಕುರಿತು ಗಮನ ಹರಿಸಿ, ಎಲ್ಲರ, ಪ್ರಮುಖವಾಗಿ ಅಪ್ರಾಪ್ತೆಯರ ಮತ್ತು ಮಹಿಳೆಯರ ಡೇಟಾ ಹಕ್ಕುಗಳನ್ನು ರಕ್ಷಿಸಲು ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.