HEALTH TIPS

ದೇಶದ ಅತಿ ಉದ್ದದ ನಾಗ್ಪುರ-ಮುಂಬೈ ಹೆದ್ದಾರಿ ಮೇನಲ್ಲಿ ಬಳಕೆಗೆ ಮುಕ್ತ

             ಮುಂಬೈ: ದೇಶದ ಅತಿ ಉದ್ದದ ಹೆದ್ದಾರಿ ಎಂದೇ ಪರಿಗಣಿಸಲಾಗುವ 'ನಾಗ್ಪುರ-ಮುಂಬೈ ಸೂಪರ್ ಕಮ್ಯುನಿಕೇಷನ್ ಎಕ್ಸ್‌ಪ್ರೆಸ್‌ವೇ' ಬರುವ ಮೇ ತಿಂಗಳಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.

                ಈ ಎಕ್ಸ್‌ಪ್ರೆಸ್‌ವೇ ಅನ್ನು 'ಹಿಂದೂ ಹೃದಯಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ' ಎಂದೂ ಕರೆಯಲಾಗುತ್ತದೆ.

             ಇದು ಮಹಾರಾಷ್ಟ್ರ ಮಾತ್ರವಲ್ಲ, ಭಾರತದಲ್ಲಿಯೇ ಈ ವರೆಗೆ ಅನುಷ್ಠಾನಗೊಳಿಸಲಾಗಿರುವ ಮಹತ್ವಾಕಾಂಕ್ಷೆಯ ಯೋಜನೆ ಎಂಬ ಹೆಗ್ಗಳಿಕೆ ಹೊಂದಿದೆ.

          ಮೊದಲ ಹಂತದಲ್ಲಿ, ಈ ಎಕ್ಸ್‌ಪ್ರೆಸ್‌ವೇ ಪೈಕಿ 'ಕಿತ್ತಳೆ ನಗರ' ನಾಗ್ಪುರ ಹಾಗೂ ಪ್ರಸಿದ್ಧ ಯಾತ್ರಾ ಕ್ಷೇತ್ರ ಶಿರಡಿಯನ್ನು ಸಂಪರ್ಕಿಸುವ ಮಾರ್ಗ ಮೇನಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ನಗರಾಭಿವೃದ್ಧಿ ಹಾಗೂ ಲೋಕೋಪಯೋಗಿ ಸಚಿವ ಏಕನಾಥ್ ಶಿಂಧೆ ಹೇಳಿದ್ದಾರೆ.

            ಈ ಎಕ್ಸ್‌ಪ್ರೆಸ್‌ವೇ ಪೈಕಿ ನಾಗ್ಪುರ-ಶಿರಡಿ ನಡುವಿನ ಹೆದ್ದಾರಿಯಲ್ಲಿ ಸ್ವತಃ ಸಂಚರಿಸಿ, ಅಂತಿಮ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ ನಂತರ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.

701 ಕಿ.ಮೀ. ಉದ್ದದ ಈ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಬಿಜೆಪಿ-ಶಿವಸೇನಾ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡಣವೀಸ್‌ ಚಾಲನೆ ನೀಡಿದ್ದರು. ಈ ಹೆದ್ದಾರಿಯು ನಾಗ್ಪುರ, ವಾರ್ಧಾ, ಅಮರಾವತಿ, ವಾಶಿಮ್, ಬುಲ್ಢಾನಾ, ಔರಂಗಾಬಾದ್, ಜಲ್ನಾ, ಅಹ್ಮದ್‌ನಗರ, ನಾಸಿಕ್ ಹಾಗೂ ಠಾಣೆ ಜಿಲ್ಲೆಗಳ ಮೂಲಕ ಹಾಯ್ದು ಹೋಗುತ್ತದೆ. ಅಕ್ಕಪಕ್ಕದ 14 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುತ್ತದೆ.

                ದೇಶದ ಬೃಹತ್‌ ಬಂದರು ಜೆಎನ್‌ಪಿಟಿಗೆ (ಜವಾಹರಲಾಲ್‌ ನೆಹರೂ ಪೋರ್ಟ್‌ ಟ್ರಸ್ಟ್‌) ಈ ಹೆದ್ದಾರಿ ನೇರ ಸಂಪರ್ಕ ಕಲ್ಪಿಸಲಿದ್ದು, ಆಮದು-ರಫ್ತು ವ್ಯವಹಾರಕ್ಕೆ ಉತ್ತೇಜನ ಸಿಗಲಿದೆ.

ಪ್ರಮುಖ ಪ್ರವಾಸಿ ತಾಣಗಳ ಜೊತೆಗೆ, ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್, ಪಶ್ಚಿಮ ಸರಕು ಕಾರಿಡಾರ್ ಹಾಗೂ ವಾರ್ಧಾ ಮತ್ತು ಜಲ್ನಾದಲ್ಲಿರುವ ಬಂದರು ಸೇರಿದಂತೆ ಪ್ರಮಖ ಕೈಗಾರಿಕಾ ಪ್ರದೇಶಗಳಿಗೂ ಸಂಪರ್ಕ ಕಲ್ಪಿಸಲಿದೆ.

           ವೈಶಿಷ್ಟ್ಯಗಳು: ಈ ಎಕ್ಸ್‌ಪ್ರೆಸ್‌ನಲ್ಲಿ 50ಕ್ಕೂ ಹೆಚ್ಚು ಮೇಲ್ಸೇತುವೆಗಳು ಹಾಗೂ 5ಕ್ಕೂ ಹೆಚ್ಚು ಸುರಂಗಗಳಿವೆ. ವಾಹನಗಳ ಸಂಚಾರಕ್ಕಾಗಿ 400ಕ್ಕೂ ಅಧಿಕ ಅಂಡರ್‌ಪಾಸ್‌ಗಳಿದ್ದರೆ, ಜನರ ಓಡಾಟಕ್ಕಾಗಿ 300ಕ್ಕೂ ಹೆಚ್ಚು ಪಾದಚಾರಿ ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಗಿದೆ.

ವನ್ಯಮೃಗಗಳ ಓಡಾಟಕ್ಕೆ ಅಡಚಣೆಯಾಗಬಾರದು ಎಂಬ ದೃಷ್ಟಿಯಿಂದ, ಅವುಗಳಿಗಾಗಿಯೇ ಅಂಡರ್‌ಪಾಸ್‌ ಹಾಗೂ ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ.

                ಈ ಹೆದ್ದಾರಿಯಲ್ಲಿ ವೇಗದ ಮಿತಿ ಗಂಟೆಗೆ 150 ಕಿ.ಮೀ. ನಿಗದಿ ಮಾಡಲಾಗಿದೆ. ಹೀಗಾಗಿ ಮುಂಬೈನಿಂದ ಔರಂಗಾಬಾದ್‌ಗೆ ಪ್ರಯಾಣದ ಅವಧಿ 4 ಗಂಟೆಗಳಾಗಲಿದ್ದರೆ, ಔರಂಗಾಬಾದ್‌ನಿಂದ ನಾಗ್ಪುರಕ್ಕೆ ಪ್ರಯಾಣಿಸಲು 4 ಗಂಟೆ ಸಾಕು.

                  ಮುಖ್ಯಾಂಶಗಳು

          ಅಂತರರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ನಿರ್ಮಾಣ

ಒಟ್ಟು 8 ಪಥಗಳಿರುವ ಹೆದ್ದಾರಿ

          ನಾಗ್ಪುರದಿಂದ ಮುಂಬೈ ತಲುಪಲು 8 ಗಂಟೆ ಸಾಕು


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries