ಕಾಸರಗೋಡು: ಬೆಂಗಳೂರಿನ ಫ್ಲ್ಯಾಟ್‍ನಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಂತಾರಾಷ್ಟ್ರೀಯ ವಾರ್ತಾ ಏಜನ್ಸಿಯೊಂದರ ಪತ್ರಕರ್ತೆ ಕಾಸರಗೋಡು ವಿದ್ಯಾನಗರ ನಿವಾಸಿ, ನಿವೃತ್ತ ಶಿಕ್ಷಕ, ಸಾಮಾಜಿಕ ಹೋರಾಟಗಾರ ನಾರಾಯಣನ್ ಪೆರಿಯ ಅವರ ಪುತ್ರಿ ಶ್ರುತಿ(36)ಅವರ ಮೃತದೇಹವನ್ನು ಕಾಸರಗೋಡಿಗೆ ತಲುಪಿಸಿ, ಪಾರೆಕಟ್ಟೆಯ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ಶ್ರುತಿ ಅವರ ಮೃತದೇಹ ಎರಡು ದಿವಸಗಳ ಹಿಂದೆ ಬೆಂಗಳೂರಿನ ವೈಟ್‍ಫೀಲ್ಡ್‍ನ ವಾಸ್ತವ್ಯಸ್ಥಳದ ಮೇಫೈರ್ ಫ್ಲ್ಯಾಟ್‍ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಾಫ್ಟ್‍ವೇರ್ ಇಂಜಿನಿಯರ್ ಆಗಿರುವ ಅನೀಶ್ ಕೋರೋತ್ ಇವರ ಪತಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಕುಟುಂಬದೊಂದಿಗೆ ಬೇರೊಂದು ಸ್ಥಳದಲ್ಲಿ ವಾಸಿಸುತ್ತಿರುವ ಶ್ರುತಿ ಅವರ ಸಹೋದರ ನಿಶಾಂತ್ ಶ್ರುತಿ ಅವರ ಮೊಬೈಲ್‍ಗೆ ಕರೆ ಮಾಡಿದರೂ, ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಫ್ಲ್ಯಾಟ್‍ಗೆ ತೆರಳಿದಾಗ ಬಾಗಿಲು ಮುಚ್ಚಿ ಒಳಗಿಂದ ಭದ್ರಪಡಿಸಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಾವಿನ ಬಗ್ಗೆ ಮನೆಯವರು ನಿಗೂಢತೆ ವ್ಯಕ್ತಪಡಿಸಿದ್ದಾರೆ. ಪತಿ ಅನೀಶ್ ವಿರುದ್ಧ ಬೆಂಗಳೂರಿನ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರೆ. ಪತಿ ಅನೀಶ್ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಘಿದ್ದಾರೆ.