HEALTH TIPS

ಕಂಚಿಕಟ್ಟೆ ಗೋಳಿತ್ತಡ್ಕ ಶ್ರೀದೈವರಾಜ ಕೋಡ್ದಬ್ಬು ದೈವಸ್ಥಾನದಲ್ಲಿ ದೈವಗಳ ನೇಮೋತ್ಸವ ನಾಳೆಯಿಂದ

       ಕುಂಬಳೆ: ಕಂಚಿಕಟ್ಟೆ ಗೋಳಿತ್ತಡ್ಕ ಶ್ರೀದೈವರಾಜ ಕೋಡ್ದಬ್ಬು ದೈವಸ್ಥಾನದಲ್ಲಿ ದೈವಗಳ ನೇಮೋತ್ಸವ ನಾಳೆಯಿಂದ(10 ರಿಂದ) 12ರ ವರೆಗೆ ಉಳಾಲು ಬೀಡು ಪ್ರಕಾಶ ಕಡಮಣ್ಣಾಯರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ  ನಡೆಯಲಿದೆ.

          ಕಾರ್ಯಕ್ರಮಗಳ ಅಂಗವಾಗಿ 10 ರಂದು ಬೆಳಗ್ಗೆ  9 ಕ್ಕೆ ಗಣಪತಿ ಹವನ, ಶುದ್ದಿಕಲಶ ಮತ್ತು ತಂಬಿಲ ನಡೆಯಲಿದೆ. 11-30ಕ್ಕೆ ಭಂಡಾರ ಏರುವುದು, ಅಪರಾಹ್ನ 2-30ಕ್ಕೆ ಜಾಗದ ಗುಳಿಗ ದೈವದ ನೇಮ, ಸಂಜೆ 6-30ಕ್ಕೆ ಮೈಸಂದಾಯ ದೈವದ ನೇಮೋತ್ಸವ, 9 ಕ್ಕೆ ಪಿಲಿಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ. 11 ರಂದು ಬೆಳಗ್ಗೆ 10-30ಕ್ಕೆ ಕೋಮರಾಯ ದೈವದ ನೇಮೋತ್ಸವ, ಅಪರಾಹ್ನ 2-30ಕ್ಕೆ ಜುಮಾದಿ ಬಂಟ ದೈವಗಳ ನೇಮೋತ್ಸವ, ಸಂಜೆ  6-30ಕ್ಕೆ ಸುಬ್ಬಮ್ಮ-ಸುಬ್ಬ ಗುಳಿಗ ದೈವಗಳ ನೇಮೋತ್ಸವ, ರಾತ್ರಿ  9 ಕ್ಕೆ ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ. 12 ರಂದು ಶನಿವಾರ ಬೆಳಗ್ಗೆ  10-30ಕ್ಕೆ ಧರ್ಮದೈವದ ನೇಮೋತ್ಸವ, ಮಧ್ಯಾಹ್ನ  2-30ಕ್ಕೆ  ಸಂಕಲೆ ಗುಳಿಗ ದೈವದ ನೇಮೋತ್ಸವ, ರಾತ್ರಿ 7 ಕ್ಕೆ ಶ್ರೀ ಕೋಡಬ್ಬು-ತಂಗಡಿ ದೈವಗಳ ನೇಮೋತ್ಸವ ನಡೆಯಲಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries