ಬದಿಯಡ್ಕ: ಪೆರಡಾಲ ಉದನೇಶ್ವರ ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥವಾಗಿ ವಿಶೇಷ ಧನ್ವಂತರಿ ಹವನ, ಶತರುದ್ರಾಭಿಷೇಕ ಸಾಮೂಹಿಕ ಸತ್ಯನಾರಾಯಣ ಪೂಜೆ, ಬಲಿವಾಡು ಕೂಟ ಮೇ ಒಂದರಂದು ವಿಜ್ರಂಭಣೆಯಿಂದ ನಡೆಯಲಿರುವುದು. ಇದರ ಆಮಂತ್ರಣ ಪತ್ರಿಕೆ ಶ್ರೀಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು. ಬಳಿಕ ನಡೆದ ಸೇವಾ ಸಮಿತಿಯ ಸಭೆಯ ಅಧ್ಯಕ್ಷತೆಯನ್ನು ಸೇವಾ ಸಮಿತಿಯ ಅಧ್ಯಕ್ಷ ಜಯದೇವ ಖಂಡಿಗೆ ವಹಿಸಿದ್ದರು. ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್, ಮೊಕ್ತೇಸರರಾದ ಕೃಷ್ಣ ಪೆರಡಾಲ, ಜಗದೀಶ ಪೆರಡಾಲ, ಮಾಜಿ ಮೊಕ್ತೇಸರ ಪಿ.ಜಿ. ಚಂದ್ರಹಾಸ ರೈ, ಸೇವಾಸಮಿತಿ ಪದಾಧಿಕಾರಿಗಳು, ಅರ್ಚಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಸ್ವಾಗತಿಸಿ ವಂದಿಸಿದರು.