ನವದೆಹಲಿ: '2ಜಿ ಪರವಾನಗಿ ಪಡೆಯಲು ನೀಡಿದ್ದ ಶುಲ್ಕ ಹಾಗೂ ಪರವಾನಗಿ ರದ್ದತಿ ನಂತರ ಕಂಪನಿಯ ಖ್ಯಾತಿಗೆ ಹಾನಿಯುಂಟಾಗಿದ್ದಕ್ಕಾಗಿ ₹ 1,454 ಕೋಟಿ ಮರುಪಾವತಿ ಮಾಡಬೇಕು' ಎಂದು ಕೋರಿ ಲೂಪ್ ಟೆಲಿಕಾಂ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಜಾಗೊಳಿಸಿತು.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಹಾಗೂ ವಿಕ್ರಮ್ ನಾಥ್ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.
'ಈ ಕ್ರಿಮಿನಲ್ ಪ್ರಕರಣದಲ್ಲಿ ಕಂಪನಿಯ ಪ್ರವರ್ತಕರನ್ನು ಖುಲಾಸೆಗೊಳಿಸಿದ ಮಾತ್ರಕ್ಕೆ, ಟೆಲಿಕಾಂ ಪರವಾನಗಿ ನೀಡುವ ಪ್ರಕ್ರಿಯೆಯು ಅಸಂಬದ್ಧವಾಗಿತ್ತು ಎಂಬ ಕೋರ್ಟ್‌ನ ತೀರ್ಮಾನವನ್ನು ಅಳಿಸಿಹಾಕಲಾಗದು' ಎಂದು ನ್ಯಾಯಪೀಠ ಹೇಳಿದೆ.
2ಜಿ ತರಂಗಾಂತರಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (ಸಿಪಿಐಎಲ್) ಎಂಬ ಸ್ವಯಂ ಸೇವಾ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಇತರರೂ ಅರ್ಜಿಗಳನ್ನು ಸಲ್ಲಿಸಿದ್ದರು.
ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ದೂರಸಂಪರ್ಕ ಸೇವೆಗೆ ಸಂಬಂಧಿಸಿದ 122 ಪರವಾನಗಿಗಳನ್ನು 2012ರಲ್ಲಿ ರದ್ದುಗೊಳಿಸಿತ್ತು. ಇವುಗಳಲ್ಲಿ ಲೂಪ್ ಟೆಲಿಕಾಂನ 21 ಪರವಾನಗಿಗಳು ಸಹ ಇದ್ದವು.