ಸಮರಸ ಚಿತ್ರಸುದ್ದಿ: ಕುಂಬಳೆ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕುಂಬಳೆ ಸನಿಹದ ಊಜಾರು ನಿವಾಸಿ, ಖ್ಯಾತ ನಾಟಿ ವೈದ್ಯೆ ರತಿ ಶೆಟ್ಟಿ ಅವರನ್ನು ಮಹಿಳಾಮೋರ್ಚಾ ಕುಂಬಳೆ ಮಂಡಲ ಸಮಿತಿ ವತಿಯಿಂದ ಮಹಿಳಾ ಮೋರ್ಚಾ ಜಿಲ್ಲಾ ಸಮಿತಿ ಕಾರ್ಯದರ್ಶಿ ಲಲಿತಾಕೇಶವ್ ಅಭಿನಂದಿಸಿದರು. ಮಂಡಲ ಕಾರ್ಯದರ್ಶಿ ರಚನಾಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.