ಕೊಲ್ಕತ್ತಾ: ನಗರದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಪುಸ್ತಕ ಮೇಳ -2022 ರಲ್ಲಿ ಪಿಕ್ ಪಾಕೆಟ್ ಮಾಡಿದ ಆರೋಪದ ಮೇಲೆ ಬಂಗಾಳಿ ನಟಿ ರೂಪಾ ದತ್ತಾ ಅವರನ್ನು ಬಂಧಿಸಲಾಗಿದೆ ಎಂದು Indiatoday ವರದಿ ಮಾಡಿದೆ.
ಕೊಲ್ಕತ್ತಾ: ನಗರದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಪುಸ್ತಕ ಮೇಳ -2022 ರಲ್ಲಿ ಪಿಕ್ ಪಾಕೆಟ್ ಮಾಡಿದ ಆರೋಪದ ಮೇಲೆ ಬಂಗಾಳಿ ನಟಿ ರೂಪಾ ದತ್ತಾ ಅವರನ್ನು ಬಂಧಿಸಲಾಗಿದೆ ಎಂದು Indiatoday ವರದಿ ಮಾಡಿದೆ.
ಜನರ ಗಮನವನ್ನು ಬೇರೆಡೆಗೆ ಸೆಳೆದು ನಟಿ ಕಳ್ಳತನ ಮಾಡುತ್ತಿದ್ದರು. ಶನಿವಾರ ರಾತ್ರಿ ಘಟನೆ ನಡೆದಿದ್ದು, ಮಹಿಳೆಯೊಬ್ಬರು ಕಸದ ಬುಟ್ಟಿಗೆ ಪರ್ಸ್‌ಗಳನ್ನು ಎಸೆಯುವುದು ಕಂಡು ಸಂಶಯ ಮೂಡಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ, ಅವರ ಬಳಿಯಿದ್ದ 75,000 ಹಣ ಎಲ್ಲಿಂದ ಬಂತು ಎಂಬುದಕ್ಕೆ ಸಮರ್ಪಕ ಉತ್ತರ ನೀಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿದೆ. .
ಈ ಹಿಂದೆ ಬಾಲಿವುಡ್ ಫಿಲ್ಮ್ ಮೇಕರ್ ಅನುರಾಗ್ ಕಶ್ಯಪ್ ರ ವಿರುದ್ಧ ತಪ್ಪಾಗಿ ಲೈಂಗಿಕ ದೌರ್ಜನ್ಯದ ಆರೋಪವನ್ನು ರೂಪಾ ದತ್ತಾ ಹೊರಿಸಿದ್ದರು. ಅನುರಾಗ್ ಕಶ್ಯಪ್ ಎಂದು ಇನ್ಯಾವುದೋ ವ್ಯಕ್ತಿ ಜೊತೆ ಫೇಸ್‌ಬುಕ್‌ನಲ್ಲಿ ಚಾಟ್ ಮಾಡಿದ್ದ ರೂಪಾ ಆತ ಅಸಭ್ಯ ಸಂದೇಶ ರವಾನಿಸಿದಾಗ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ದೂರು ನೀಡಿದ್ದರು. ಬಳಿಕ ಪೊಲೀಸರು ಅದು ನಿರ್ದೇಶಕ ಅನುರಾಗ್ ಕಶ್ಯಪ್ ಅಲ್ಲ ಎಂದು ಸ್ಪಷ್ಟಪಡಿಸಿದ್ದರು.