ಕೇವ್: ಉಕ್ರೇನ್ ಮೇಲೆ ರಷ್ಯಾ ಸೇನೆ ಆಕ್ರಣವು ಏಳನೇ ದಿನಕ್ಕೆ ಕಾಲಿಡುತ್ತಿದ್ದಂತೆ ದಕ್ಷಿಣ ಉಕ್ರೇನಿನ ನಗರವಾದ ಖೆರ್ಸೋನ್ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ರಷ್ಯಾದ ಸೈನ್ಯವು ಹೇಳಿಕೊಂಡಿದೆ.
'ರಷ್ಯಾದ ಸಶಸ್ತ್ರ ಪಡೆಗಳು ಖೆರ್ಸೋನ್ ಪ್ರಾದೇಶಿಕ ಕೇಂದ್ರವನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿವೆ ಎಂದು ರಕ್ಷಣಾ ಸಚಿವಾಲಯ ವಕ್ತಾರ ಇಗೊರ್ ಕೊನಾಶೆಂಕೋವ್ ಹೇಳಿದರು.
ಸಾರ್ವಜನಿಕ ಸೇವೆಗಳು ಮತ್ತು ಸಾರಿಗೆ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದ್ದಾರೆ. ನಗರವು ಆಹಾರ ಮತ್ತು ಅಗತ್ಯ ವಸ್ತುಗಳ ಕೊರತೆಯನ್ನು ಅನುಭವಿಸುತ್ತಿಲ್ಲ ಎಂದು ಇಗೊರ್ ಹೇಳಿದರು. ರಷ್ಯಾದ ಸೈನ್ಯ ಮತ್ತು ಸ್ಥಳೀಯ ಅಧಿಕಾರಿಗಳ ನಡುವೆ ಸುವ್ಯವಸ್ಥೆಯನ್ನು ಕಾಪಾಡುವುದು, ಜನಸಂಖ್ಯೆಯನ್ನು ರಕ್ಷಿಸುವುದು ಮತ್ತು ಸಾರ್ವಜನಿಕ ಸೇವೆಗಳು ಕಾರ್ಯನಿರ್ವಹಿಸುವ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಹೇಳಿದರು.
ಖೆರ್ಸೋನ್ ಮೇಯರ್ ಇಗೊರ್ ಕೋಲಿಖೈವ್ ಫೇಸ್ಬುಕ್ ಪೋಸ್ಟ್ನಲ್ಲಿ ನಾವು ಇನ್ನೂ ಉಕ್ರೇನಿಯನ್ನರು. ಉಕ್ರೇನ್ ಇನ್ನೂ ದೃಢವಾಗಿದೆ. ರಷ್ಯಾದ ಸೈನ್ಯದ ಹಕ್ಕುಗಳನ್ನು ಸ್ಪಷ್ಟವಾಗಿ ತಿಸ್ಕರಿಸಿದ ಅವರು ಮೃತರ ದೇಹಗಳನ್ನು ಸಂಗ್ರಹಿಸಲು ಮತ್ತು ವಿದ್ಯುತ್, ಅನಿಲ, ನೀರು ಹಾನಿಗೊಳಗಾದ ಸ್ಥಳದಲ್ಲಿ ಮರುಸ್ಥಾಪಿಸಲು ಒಂದು ಮಾರ್ಗವನ್ನು ಕಂಡುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಆದರೆ ನಾನು ಈಗಿನಿಂದಲೇ ನಿಮಗೆ ಎಚ್ಚರಿಕೆ ನೀಡುತ್ತೇನೆ. ಇಂದು ಈ ಕಾರ್ಯಗಳನ್ನು ಪೂರ್ಣಗೊಳಿಸುವುದು ಎಂದರೆ ಪವಾಡವನ್ನು ಮಾಡುವುದು ಎಂದು ಅವರು ಹೇಳಿದರು.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕಳೆದ ಗುರುವಾರ ಪಾಶ್ಚಿಮಾತ್ಯ ಪರ ಉಕ್ರೇನ್ ಅನ್ನು ಆಕ್ರಮಿಸಲು ಸೈನ್ಯವನ್ನು ಡಿ-ಮಿಲಿಟರೈಸ್ ಮತ್ತು ಡೆನಾಜಿಫೈ ಮಾಡಲು ಆದೇಶಿಸಿದರು.