ತಿರುವನಂತಪುರಂ: ರಾಜ್ಯ ಬಜೆಟ್ ಅನ್ನು ವಿತ್ತ ಸಚಿವ ಕೆ.ಎನ್.ಬಾಲಗೋಪಾಲ್ ಇಂದು ಮಂಡಿಸಲಿದ್ದು, ಬೆಳಗ್ಗೆ 9 ಗಂಟೆಗೆ ಬಜೆಟ್ ಮಂಡನೆ ಆರಂಭವಾಗಲಿದೆ. ಆದರೆ ಈ ಬಾರಿ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಲಿದೆ. ಕೋವಿಡ್ ನಂತರದ ಕೇರಳದ ಅಭಿವೃದ್ಧಿ ದೃಷ್ಟಿಯನ್ನು ಬಜೆಟ್ ಪ್ರತಿಬಿಂಬಿಸುತ್ತದೆ ಎಂದು ಹಣಕಾಸು ಸಚಿವರು ಹೇಳಿರುವರು.
ಬಜೆಟ್ ಹೊಸ ತೆರಿಗೆ ಪ್ರಸ್ತಾವನೆಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ.
ಕೆ ರೈಲ್‍ನಂತಹ ಪ್ರಮುಖ ಸರ್ಕಾರಿ ಯೋಜನೆಗಳ ಭವಿಷ್ಯದ ಕ್ರಮಗಳ ಬಗ್ಗೆ ಪ್ರಮುಖ ಘೋಷಣೆಗಳನ್ನು ಸಹ ಬಜೆಟ್ ಒಳಗೊಂಡಿರುತ್ತದೆ ಎಂದು ಅಂದಾಜಿಸಲಾಗಿದೆ. ಕೊರೋನಾ ನಂತರ ಬಿಕ್ಕಟ್ಟಿನಲ್ಲಿರುವ ಪ್ರವಾಸೋದ್ಯಮ ಮತ್ತು ಕೃಷಿ ಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸುವ ಘೋಷಣೆಗಳಿರಬಹುದೆಂದು ಜನರು ಆಶಿಸುತ್ತಿದ್ದಾರೆ.