ಕಾಸರಗೋಡು: ರಾಷ್ಟ್ರೀಯ ನೂತನ ಶಿಕ್ಷಣ ನೀತಿಯನ್ನು ವಿಶ್ವ ವಇದ್ಯಾಲಯಗಳಲ್ಲಿ ಜಾರಿಗೊಳಿಸಲು ರೂಪುರೇಷೆ ತಯಾರಿಸುವ ನಿಟ್ಟಿನಲ್ಲಿ ದೇಶದ ಪ್ರಮುಖ ವಿಶ್ವ ವಿದ್ಯಾಲಯಗಳ ಉಪಕುಲಪತಿಗಳು ಪಾಲ್ಗೊಳ್ಳುವ ರೌಂಡ್ ಟೇಬಲ್ ಕಾನ್‍ಫರೆನ್ಸ್ ಮಾ. 3ಹಾಗೂ 4ರಂದು ಕಾಸರಗೋಡು ಪೆರಿಯದಲ್ಲಿ ಚಟುವಟಿಕೆ ನಡೆಸುತ್ತಿರುವ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯದಲ್ಲಿ ಜರುಗಲಿರುವುದಾಗಿ ಉಪ ಕುಲಪತಿ ಪ್ರೊ. ಎಚ್. ವೆಂಕಟೇಶ್ವರಲು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದೇಶದ ವಿವಿಧ ವಿಶ್ವ ವಿದ್ಯಾಲಯಗಳ ಉಪಕುಲಪತಿಗಳು, ಶಿಕ್ಷಣ ತಜ್ಞರು ಪೆರಿಯ ಕ್ಯಾಂಪಸ್‍ನಲ್ಲಿ ನಡೆಯುವ ಸಮಾವೇಶದಲ್ಲಿ ಖುದ್ದಾಗಿ ಅಥವಾ ಆನ್‍ಲೈನ್ ಮೂಲಕ ಪಾಲ್ಗೊಳ್ಳಲಿರುವರು. ಶಿಕ್ಷಣ ವಲಯದಲ್ಲಿ ಚಟುವಟಿಕೆ ನಡೆಸುತ್ತಿರುವ ಶಿಕ್ಷಾ ಸಂಸ್ಕøತಿ ಉತ್ಥಾನ್ ನ್ಯಾಸ್ ಸಹಕಾರದೊಂದಿಗೆ ಎರಡು ದಿವಸಗಳ ಸಮಾವೇಶ ಆಯೋಜಿಸಲಾಘಿದೆ. 4ರಂದು ಬೆಳಗ್ಗೆ 9.30ಕ್ಕೆ ಕ್ಯಾಂಪಸ್‍ನ ಸಬರ್ಮತಿ ಸಭಾಂಗಣದಲ್ಲಿ ನಡೆಯುವ ಸಮಾರಂಭವನ್ನು ಕೇಂದ್ರ ಸಹಾಯಕ ಶಿಕ್ಷಣ ಸಚಿವ ಡಾ. ಸುಭಾಸ್ ಸರ್ಕಾರ್ ಉದ್ಘಾಟಿಸುವರು. ಳ ಕೇಂದ್ರೀಯ ವಿಶ್ವ ವಿದ್ಯಾಳಯದಲ್ಲಿ ಜರುಗಲಿರುವುದಾಗಿ ಉಪ ಕುಲಪತಿ ಪ್ರೊ. ಎಚ್. ವೆಂಕಟೇಶ್ವರಲು ಅಧ್ಯಕ್ಷತೆ ವಹಿಸುವರು. ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯ ಪ್ರೊ. ಎಂ.ಕೆ ಶ್ರೀಧರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕ್ಷಾ ಸಂಸ್ಕøತಿ ಉತ್ಥಾನ್ ನ್ಯಾಸ್ ರಾಷ್ಟ್ರೀಯ ಕಾರ್ಯದರ್ಶಿ ಡಾ. ಅತುಲ್ ಕೊಠಾರಿ ಮುಖ್ಯ ಭಾಷಣ ನಡೆಸುವರು. ಅಕಾಡಮಿಕ್ ಡೀನ್ ಪ್ರೊ. ಅಮೃತ್ ಜಿ. ಕುಮಾರ್, ರಿಜಿಸ್ಟ್ರಾರ್ ಡಾ. ಎನ್. ಸಂತೋಷ್ ಕುಮಾರ್ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಿಜಿಸ್ಟ್ರಾರ್ ಡಾ. ಎಸ್. ಸಂತೋಷ್ ಕುಮಾರ್, ಪಬ್ಲಿಕ್ ರಿಲೇಶನ್ಸ್ ಅಧಿಕಾರಿ ಕೆ. ಸುಜಿತ್ ಉಪಸ್ಥಿತರಿದ್ದರು.