ಬೀಜಿಂಗ್: ಚೀನಾದಲ್ಲಿ 133 ಜನ ಪ್ರಯಾಣಿಸುತ್ತಿದ್ದ ವಿಮಾನವೊಂದು ದಕ್ಷಿಣ ಪ್ರಾಂತ್ಯದ ಗುವಾಂಗ್ಸಿಯಲ್ಲಿ ಪತನಗೊಂಡಿದ್ದು, ಪ್ರಯಾಣಿಕರು ಬದುಕಿರುವ ಸಾಧ್ಯತೆಗಳು ಕ್ಷೀಣ ಎಂದು ಹೇಳಲಾಗುತ್ತಿದೆ.
ರಕ್ಷಣಾ ಕಾರ್ಯಾಚರಣೆಗೆ ಕತ್ತಲು ಅಡ್ಡಿಯಾಗಿದ್ದು ಜೀವಂತವಿರುವವರ ಸಂಖ್ಯೆ ಕಡಿಮೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈಸ್ಟರ್ನ್ ಏರ್ಲೈನ್ಸ್ಗೆ ಸೇರಿದ ಬೋಯಿಂಗ್ 737-800 ವಿಮಾನ ಒU5735 ವಿಮಾನ ಟೆಂಗ್ ಕೌಂಟಿಯ ವುಝೌ ನಗರದ ಬಳಿ ಅಪಘಾತಕ್ಕೀಡಾಗಿತ್ತು. ಈ ವಿಮಾನ ಕನ್ಮಿಂಗ್ ನಿಂದ ಗುವಾಂಗ್ಸಿ ನಗರಕ್ಕೆ ತೆರಳುತ್ತಿತ್ತು. ಕಳೆದ 10 ವರ್ಷಗಳಲ್ಲಿ ಚೀನಾದಲ್ಲಿ ಸಂಭವಿಸಿದ ವೈಮಾನಿಕ ದುರಂತ ಇದಾಗಿದೆ.
ಸರ್ಚ್ ಲೈಟ್ಸ್ ಗಳನ್ನು ಬಳಕೆ ಮಾಡಿಕೊಂಡು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಕಾಡು ಪ್ರದೇಶವಾಗಿರುವುದರಿಂದ ಕತ್ತಲ ಪರಿಣಾಮ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ.
ವಿಮಾನದಲ್ಲಿ 123 ಪ್ರಯಾಣಿಕರಿ ಹಾಗೂ 9 ಸಿಬ್ಬಂದಿಗಳು ಸೇರಿ 132 ಮಂದಿ ವಿಮಾನದಲ್ಲಿದ್ದರು ಎಂದು ಚೀನಾದ ಪ್ರಯಾಣಿಕ ವಿಮಾನ ಆಡಳಿತ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ. ವಿಮಾನ ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ ವಿದೇಶಿಗರು ಯಾರೂ ಆ ವಿಮಾನದಲ್ಲಿ ಇರಲಿಲ್ಲ.