ಉಪ್ಪಳ ; ಮುಳಿಂಜ ssssssಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ವನ್ಯ ಜೀವಿ ದಿನಾಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಶಾಲಾ ನಿರ್ವಾಹಕ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಸಭಾ ಅಧ್ಯಕ್ಷತೆ ವಹಿಸಿದ್ದು ಮಂಜೇಶ್ವರ ಬಿ ಆರ್ ಸಿ ಯ ಕ್ಲಸ್ಟರ್ ಕಾರ್ಡಿನೇಟರ್ ಮೋಹಿನಿ ಕುಮಾರಿ ಹಾಗೂ ಬಿಜೇಶ್ ಭಾಗವಹಿಸಿ ವಿಶ್ವವನ್ಯಜೀವಿ ದಿನಾಚರಣೆ ಔಚಿತ್ಯವನ್ನು ಪರಿಸರ ಸಂರಕ್ಷಣೆಯ ಅಗತ್ಯವನ್ನು ತಿಳಿಸಿದರು... ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಸ್ವಾಗತಿಸಿ, ಹಿರಿಯ ಶಿಕ್ಷಕಿ ಪುಷ್ಪಲತ ವಂದಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ಸುಹೇಶ ನಿರ್ವಹಿಸಿದರು.