ಕುಂಬಳೆ: ಮುಹಿಮ್ಮಾತಿನ ಆರಂಭದ ಸಂಕಷ್ಟದ ದಿನಗಳಲ್ಲಿ ಸಯ್ಯಿದ್ ತಾಹಿರುಲ್ ಅಹ್ದಲ್ ಅವರಿಗೆ ಶಕ್ತಿ ತುಂಬಿದ ಮುಖಂಡರು ಹಾಗೂ ಕಾರ್ಯಕರ್ತರ ಶ್ರಮವೇ ಮುಹಿಮ್ಮಾತಿನ ಇಂದಿನ ಬೆಳವಣಿಗೆಗೆ ಕಾರಣ ಎಂದು ಮುಹಿಮ್ಮಾತ್‍ನ ಕಾರ್ಯದರ್ಶಿ ಸಯ್ಯಿದ್ ಮುನೀರುಲ್ ಅಹ್ದಲ್ ಹೇಳಿದರು.
ಝೈನುಲ್ ಮುಹಖ್ಖಿಕೀನ್ ಸಯ್ಯಿದ್ ತಾಹಿರುಲ್ ಅಹ್ದಲ್ ತಂಙಳ್ ಉರೂಸಿನ ಮೂರನೇ ದಿನದಂದು ಮುಹಿಮ್ಮತ್ ನಲ್ಲಿ ನಡೆದ ನೆನಪಿನ ಮುಸ್ಸಂಜೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮುಹಿಮ್ಮಾತ್‍ನೊಂದಿಗೆ ಮತ್ತು ಮುಹಿಮ್ಮಾತ್ ಶಿಲ್ಪಿ ಸಯ್ಯಿದ್ ತ್ವಾಹಿರುಲ್ ಅಹ್ದಲ್‍ರವರೊಂದಿಗೆ ಶಿಕ್ಷಣ ಮತ್ತು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಕೈ ಜೋಡಿಸಿ ನಮ್ಮಿಂದ ಅಗಲಿದ ಸರ್ವರನ್ನೂ ಮುಹಿಮ್ಮಾತ್ ಸ್ಮರಿಸುತ್ತದೆ ಎಂದು ಅವರು ಹೇಳಿದರು.