ಬದಿಯಡ್ಕ: ಕೇರಳ ಆಯುರ್ವೇದ ಪಾರಂಪರ್ಯ ವೈದ್ಯ ಫೆಡರೇಶನ್ ಹಾಗೂ ಪೈತೃಕಂ ಕೇರಳ ಆಯುರ್ವೇದ ಪಾರಂಪರ್ಯ ನಾಟಿವೈದ್ಯ ಸ್ವಸಹಾಯ ಸಂಘದ ನೇತೃತ್ವದಲ್ಲಿ ಕಿಳಿಂಗಾರು ಸಾಯಿರಾಂ ಭಟ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಹಾಗೂ ಅಳಿದುಹೋಗುತ್ತಿರುವ ಔಷಧೀಯ ಸಸ್ಯಗಳನ್ನು ಉಳಿಸಬೇಕೆನ್ನುವ ಆಂದೋಲನದೊಂದಿಗೆ ಔಷಧೀಯ ಸಸ್ಯಗಳ ವಿತರಣೆ ಕಾರ್ಯಕ್ರಮ ಕಿಳಿಂಗಾರು ಸಾಯಿರಾಂ ಭಟ್ ಅವರ ನಿವಾಸದಲ್ಲಿ ಜರಗಿತು.
ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನೀರ್ಚಾಲು ಘಟಕದ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್ ಔಷಧೀಯ ಸಸ್ಯಗಳನ್ನು ಶಾರದಾ ಸಾಯಿರಾಂ ಭಟ್ ಅವರಿಗೆ ನೀಡಿ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಚಂದ್ರನ್ ವೈದ್ಯರ್ ಅಧ್ಯಕ್ಷತೆ ವಹಿಸಿದ್ದರು. ಕೆ.ಮುಹಮ್ಮದಾಲಿ ವೈದ್ಯರ್, ತಂಬಾನ್ ವೈದ್ಯರ್ ಚೀಮೇನಿ, ಮೊಯ್ದೀನ್ ಕೋಯ ಗುರುಕ್ಕಳ್, ಕೆ.ಎನ್.ಕೃಷ್ಣ ಭಟ್ ಕಿಳಿಂಗಾರು, ಅಬ್ದುಲ್ ಖಾದರ್ ಗುರುಕ್ಕಳ್, ಗೋವಿಂದ ವೈದ್ಯರ್ ಪಾಕ್ಕಂ, ವಲ್ಸನ್ ವೈದ್ಯರ್ ಚಿತ್ತಾರಿಕಲ್, ಸುಭದ್ರ ವೈದ್ಯರ್, ವಿನಯ್ ಚೀಮೇನಿ ಮೊದಲಾದವರು ಪಾಲ್ಗೊಂಡಿದ್ದರು. ಕೆ.ವಿ.ಕೃಷ್ಣ ಪ್ರಸಾದ ವೈದ್ಯರ್ ಸ್ವಾಗತಿಸಿ, ಕೆ.ಮುಹಮ್ಮದಾಲಿ ವೈದ್ಯರ್ ವಂದಿಸಿದರು.